ETV Bharat / entertainment

ಸುದೀಪ್​ ನಿರೂಪಣೆಯ ಕೊನೆ 'ಬಿಗ್​ ಬಾಸ್' ​​​​: ವೇದಿಕೆಗೆ ಕಿಚ್ಚು ಹಚ್ಚಿತು ಕಿಚ್ಚನ​ 'ಮ್ಯಾಕ್ಸಿಮಮ್' ಎಂಟ್ರಿ - ಗೆಲುವು ಯಾರಿಗೆ? - BIGG BOSS GRAND FINALE

ಸುದೀಪ್​ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್​ ಬಾಸ್​​ ಕನ್ನಡದ ಕೊನೆ ಸೀಸನ್​ನ ಗ್ರ್ಯಾಂಡ್​​​ ಫಿನಾಲೆ ಇಂದು ಮತ್ತು ನಾಳೆ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ನಿಮ್ಮ ಪ್ರಕಾರ ವಿಜೇತರು ಯಾರು?

Sudeep
ಅಭಿನಯ ಚಕ್ರವರ್ತಿ ಸುದೀಪ್​​ (Photo: Social media)
author img

By ETV Bharat Entertainment Team

Published : Jan 25, 2025, 1:06 PM IST

ಬಿಗ್​ ಬಾಸ್​, ವ್ಯಕ್ತಿತ್ವಗಳ ಆಟ. ಒಂದೊಳ್ಳೆ ವ್ಯಕ್ತಿತ್ವದ ಗೆಲುವು ನಿರ್ಧಾರ ಮಾಡೋದು ಪ್ರೇಕ್ಷಕ ಪ್ರಭುಗಳು. ಬಿಗ್​ ಬಾಸ್​ ಅನ್ನೋದೇ ಒಂದು ಎಮೋಷನ್​​. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರೋ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಅಭಿನಯ ಚಕ್ರವರ್ತಿ ಸುದೀಪ್​ ಈ ಶೋನ ಹೈಲೆಟ್​​. ಫೈನಲಿ, ಸೀಸನ್​ 11ರ ಗ್ರ್ಯಾಂಡ್​ ಫಿನಾಲೆ ಬಂದೇ ಬಿಡ್ತು. ವಿಜೇತರು ಯಾರೆಂಬುದನ್ನು ತಿಳಿದುಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದು, ಕನ್ನಡಿಗರ ಕುತೂಹಲ ಗರಿಗೆದರಿದೆ.

ಕಿಚ್ಚ ರೆಡಿ ಆಗಾಯ್ತು, ಕಿಚ್ಚೆಬ್ಬಿಸೋ ರಿಸಲ್ಟ್ ಮಾತ್ರ ಬಾಕಿ! ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆ, ಇಂದು-ನಾಳೆ ಸಂಜೆ 6ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನಡಿ ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​ಗಳಲ್ಲಿ ಪ್ರೋಮೋ ಅನಾವರಣಗೊಂಡಿದೆ. ಅದ್ಧೂರಿ ವೇದಿಕೆಗೆ ಕಿಚ್ಚು ಹಚ್ಚಿದ್ದಾರೆ ಕಿಚ್ಚ. ಪ್ರೋಮೋದಲ್ಲಿ ತಮ್ಮ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡಿರುವ ಮ್ಯಾಕ್ಸ್​ ಸಿನಿಮಾ ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ. ಸಿನಿಮಾದ ಸ್ಟೆಪ್ಪೇ ಈ ಸ್ಟೇಜ್​ನಲ್ಲೂ ಹಾಕಿದ್ದು, ಗ್ರ್ಯಾಂಡ್​ ಫಿನಾಲೆ ಭರ್ಜರಿಯಾಗಿ ಮೂಡಿ ಬರಲಿದೆ ಅನ್ನೋದು ಸ್ಪಷ್ಟವಾಗಿದೆ.

ಸುದೀಪ್​​​ ನಿರೂಪಣೆಯಲ್ಲಿ ಬರುವ ಈ ಕಾರ್ಯಕ್ರಮ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದೆ. ಶನಿವಾರ ಮತ್ತು ಭಾನುವಾದ ಎಪಿಸೋಡ್​ ನೋಡಲೆಂದೇ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅಷ್ಟರ ಮಟ್ಟಿಗೆ ಇವರ ನಿರೂಪಣಾ ಶೈಲಿ ಫೇಮಸ್​ ಆಗಿದೆ. ವಾರದಲ್ಲಿ ನಡೆದಿರೋ ಸರಿ ತಪ್ಪುಗಳನ್ನು ಚರ್ಚಿಸಿ, ಸ್ಪರ್ಧಿಗಳನ್ನು ತಿದ್ದಿ ತೀಡೋ ಕೆಲಸವನ್ನು ಸುದೀಪ್​ ಮಾಡ್ತಾರೆ. ಆದ್ರೆ ಸೀಸನ್​ 11 ಸುದೀಪ್​ ಅವರ ಕೊನೆ ಸೀಸನ್​ ಅನ್ನೋದು ಮಾತ್ರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೆಚ್ಚಿನ ಸಿನಿಮಾಗಳನ್ನು ಪ್ರೇಕ್ಷಕರಿಗೆ ಪೂರೈಸುವ ಪಣ ತೊಟ್ಟಿರುವ ಸುದೀಪ್​​, ಇದು ನನ್ನ ಕೊನೆ ಸೀಸನ್​ ಎಂದುಬಿಟ್ಟಿದ್ದಾರೆ. ಅದಾಗ್ಯೂ ಸುದೀಪ್​ ನಿರ್ಧಾರ ಬದಲಿಸಿಕೊಳ್ಳಲಿದ್ದಾರಾ? ಅಭಿಮಾನಿಗಳಿಗಾಗಿ ಬಿಗ್ ಬಾಸ್​ ನಿರೂಪಣೆಯನ್ನು ಮುಂದುವರಿಸಲಿದ್ದಾರಾ ಎಂದು ಕಾದು ಕುಳಿತಿರುವವರ ಸಂಖ್ಯೆ ದೊಡ್ಡದಿದೆ.

ಬಿಗ್​ ಬಾಸ್ ಕನ್ನಡ ಸೀಸನ್​ 11ರ​ ಫೈನಲಿಸ್ಟ್ಸ್:

  • ಹನುಮಂತು
  • ಮೋಕ್ಷಿತಾ
  • ತ್ರಿವಿಕ್ರಮ್​
  • ಮಂಜು
  • ರಜತ್ ಕಿಶನ್​
  • ಭವ್ಯಾ

ಇದನ್ನೂ ಓದಿ: 'ಟಾಕ್ಸಿಕ್​'ನಲ್ಲಿ ರಾಕಿಂಗ್​​ ಸ್ಟಾರ್​ ಯಶ್​ಗೆ ಜೋಡಿಯಾದ ನಯನತಾರಾ: ದೃಢಪಡಿಸಿದ ನಟ ಅಕ್ಷಯ್​

ಬಿಗ್​ ಬಾಸ್ ಹಿಂದಿ 18​ ವಿಜೇತರು : ಬಿಗ್​ ಬಾಸ್​ ವಿವಿಧ ಭಾಷೆಗಳಲ್ಲಿ ಮೂಡಿಬರುತ್ತದೆ. ಸೂಪರ್ ಸ್ಟಾರ್ ಸಲ್ಮಾನ್​ ಖಾನ್ ನಿರೂಪಣೆಯಲ್ಲಿ ಮೂಡಿಬರುವ ಹಿಂದಿ ಶೋ ಕಳೆದ ಭಾನುವಾರ ತನ್ನ 18ನೇ ಸೀಸನ್​​ ಅನ್ನು ಪೂರ್ಣಗೊಳಿಸಿತು.​ ಕರಣ್ ವೀರ್ ಮೆಹ್ರಾ ವಿನ್ನರ್​ ಆಗಿ ಟ್ರೋಫಿ ಎತ್ತಿಕೊಂಡ್ರೆ, ವಿವಿಯನ್ ಡಿಸೆನಾ ರನ್ನರ್​ ಅಪ್​ ಆದ್ರು. ನಂತರದ ಸ್ಥಾನಗಳನ್ನು ಕ್ರಮವಾಗಿ ರಜತ್ ದಲಾಲ್, ಅವಿನಾಶ್ ಮಿಶ್ರಾ, ಚುಮ್ ದರಂಗ್ ಮತ್ತು ಈಶಾ ಸಿಂಗ್ ಗೆದ್ದುಕೊಂಡರು.

ಇದನ್ನೂ ಓದಿ: ಯಾರಾಗಲಿದ್ದಾರೆ ಬಿಗ್ ಬಾಸ್​​​ ವಿನ್ನರ್?: ನಿಮ್ಮಿಷ್ಟದ ಸ್ಪರ್ಧಿ ಯಾರು, ಗೆಲುವಿಗೆ ಅವರು ಅರ್ಹರೇ?​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.