ETV Bharat / bharat

ಮಹಾ ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿದ ಬಾಲಿವುಡ್​ ನಟಿ ಮಮತಾ ಕುಲಕರ್ಣಿ - MAMTA KULKARNI BECOMES HINDU MONK

90ರ ದಶಕದಲ್ಲಿ ನಟಿಯಾಗಿ ಮಿಂಚಿದ್ದ ಮಮತಾ ಕುಲಕರ್ಣಿ ಇದೀಗ ಎಲ್ಲಾ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ.

prayagraj-mahakumbh-2025-bollywood-actress-mamta-kulkarni-became-mahamandaleshwar-of-kinrar-akhara-offered-pind-daan-of-herself-and-her-family-at-sangam
ಮಮತಾ ಕುಲಕರ್ಣಿ (ETV Bharat)
author img

By ETV Bharat Karnataka Team

Published : Jan 25, 2025, 1:22 PM IST

ಪ್ರಯಾಗ್​ರಾಜ್ (ಉತ್ತರ ಪ್ರದೇಶ) ​: ಒಂದು ಕಾಲದಲ್ಲಿ ಬಾಲಿವುಡ್​ ನಟಿಯಾಗಿ ಗುರುತಿಸಿಕೊಂಡಿದ್ದ ಮಮತಾ ಕುಲಕರ್ಣಿ ಇದೀಗ ಸನ್ಯಾಸತ್ವದ ಹಾದಿ ತುಳಿದಿದ್ದಾರೆ. ಅವರು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದುಮ, ಇದರ ಅಂಗವಾಗಿ ಸಂಗಮ್​ನಲ್ಲಿ ಕುಟುಂಬ ಸದಸ್ಯರಿಗೆ ಪಿಂಡದಾನ ಮಾಡಿದರು. ಈ ಪ್ರಕ್ರಿಯೆ ಕಾರ್ಯಗಳನ್ನು ಪೂರೈಸಿದ್ದ ನಟಿಗೆ ಕಿನ್ನರ್​ ಅಖಾರದಲ್ಲಿ ಸನ್ಯಾಸ ದೀಕ್ಷೆ ನೀಡಲಾಯಿತು.

ಅಖಾರದ ಆಚಾರ್ಯ ಮಹಾಮಂಡಲೇಶ್ವರ ಡಾ. ಲಕ್ಷ್ಮೀನಾರಾಯಣ ತ್ರಿಪಾಠಿ ಅವರು ಮಮತಾ ಕುಲಕರ್ಣಿ ಅವರನ್ನು ಅಖಾರಕ್ಕೆ ಸೇರಿಸಿಕೊಂಡು, ಮಹಾಮಂಡಲೇಶ್ವರ ಬಿರುದು ನೀಡಿದ್ದಾರೆ. ಇನ್ಮುಂದೆ ಅವರನ್ನು ಶ್ರೀ ಯಮಾಯಿ ಮಮತಾ ನಂದ ಗಿರಿ ಎಂದು ಕರೆಯಲಾಗುತ್ತದೆ. ದೀಕ್ಷೆ ಪಡೆದ ಅವರಿಗೆ ಆಚಾರ್ಯ ಮಹಾಮಂಡಲೇಶ್ವರರ ಪ್ರಕಾರ ವೃಂದಾವನದಲ್ಲಿರುವ ಆಶ್ರಮದ ಜವಾಬ್ದಾರಿಯನ್ನು ನೀಡಲಾಗಿದ್ದು, ಇನ್ಮುಂದೆ ಅವರು ತಮ್ಮ ಸಂಪೂರ್ಣ ಜೀವನವನ್ನು ಸನಾತನ ಧರ್ಮದ ಪ್ರಚಾರಕ್ಕಾಗಿ ಮೀಸಲಿಡಲಿದ್ದಾರೆ.

ಯಾರು ಈ ಮಮತಾ ಕುಲಕರ್ಣಿ : ಮಮತಾ ಕುಲಕರ್ಣಿ 90ರ ದಶಕದಲ್ಲಿ ಬಾಲಿವುಡ್​ನಲ್ಲಿ ಖ್ಯಾತ ನಟಿಯಾಗಿ ಮಿಂಚಿದ್ದರು. ಮಹಾಕುಂಭ ಮೇಳದಲ್ಲಿ ಅವರು ಸನ್ಯಾಸ ದೀಕ್ಷೆ ಪಡೆದಿರುವುದನ್ನು ಸ್ವತಃ ಕಿನ್ನರ್​ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮೀ ನಾರಾಯಣ ತ್ರಿಪಾಠಿ ದೃಢಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟಿರುವ ಚಿತ್ರನಟಿ ಮಮತಾ ಕುಲಕರ್ಣಿ ಅವರು ಇನ್ನು ಮುಂದೆ ಶ್ರೀ ಯಮಾಯಿ ಮಮತಾ ನಂದ ಗಿರಿ ಎಂದು ಕರೆಯಲ್ಪಡಲಿದ್ದಾರೆ. ಅವರ ಪಿಂಡಾನ್ ಮತ್ತು ಕೂದಲು ಕತ್ತರಿಸುವುದು ಸೇರಿದಂತೆ ಇತರ ಆಚರಣೆಗಳು ಸಂಗಮ ದಡದಲ್ಲಿ ನಡೆದಿದ್ದು, ಅವರ ಪಟ್ಟಾಭಿಷೇಕ ಕೂಡ ನೇರವೇರಿದೆ ಎಂದು ತಿಳಿಸಿದರು.

ಸನಾತನದ ಧರ್ಮದಲ್ಲಿ ನಂಬಿಕೆ: ಕಳೆದ ರಾತ್ರಿ ಮಮತಾ ಕುಲಕರ್ಣಿ ಅವರು ಜುನಾ ಅಖಾರದ ಸ್ತ್ರೀ ಮಹಾಮಂಡಲೇಶ್ವರರೊಂದಿಗೆ ತಮ್ಮನ್ನು ಭೇಟಿಯಾಗಲು ಬಂದಿದ್ದರು. ಅವರಿಗೆ ಸನಾತನ ಧರ್ಮದಲ್ಲಿ ಅತೀವ ನಂಬಿಕೆ ಇದ್ದು, ಈ ಮೊದಲು ಜುನಾ ಅಖಾರದ ಮಹಾಮಂಡಲೇಶ್ವರನೊಂದಿಗೆ ಇದ್ದರು. ಇದೀಗ ಜುನಾ ಅಖಾರದೊಂದಿಗೆ ಸನಾತನದ ಹಾದಿಯಲ್ಲಿ ಮುಂದುವರಿಯಲು ಬಯಸಿದ್ದಾರೆ. ಅವರ ಒಲವನ್ನು ಕಂಡು ಅವರನ್ನು ಮಹಾ ಮಂಡಲೇಶ್ವರಿಯಾಗಿ ಮಾಡಲು ನಿರ್ಧರಿಸಲಾಯಿತು. ಇದಕ್ಕಾಗಿ ಅವರಿಂದ ಯಾವುದೇ ಹಣ ಪಡೆದಿಲ್ಲ. ಅವರು ಸನಾತನ ನಿಯಮ ಅನುಸರಿಸದಿದ್ದರೆ, ಅವರನ್ನು ಹೊರ ಹಾಕಬಹುದು ಎಂದರು.

ನಟಿ ಮಮತಾ ಕುಲಕರ್ಣಿ ಸನಾತನ ಸಂಸ್ಥೆಗಾಗಿ ಕೆಲಸ ಮಾಡಬೇಕು, ಸನಾತನಕ್ಕಾಗಿ ಸಿನಿಮಾ ಮಾಡಬೇಕು, ತನಗೆ ಯಾವುದೇ ತೊಂದರೆ ಇಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ. ಆದರೆ, ಮಮತಾ ಸನಾತನದಿಂದ ದೂರಾದ ಬಳಿಕ ಯಾವುದೇ ಕೆಲಸ ಮಾಡಬೇಕಿಲ್ಲ. ಸದ್ಯ ಗಂಗಾಸ್ನಾನ ಮಾಡಿರುವ ಅವರು ಶೀಘ್ರದಲ್ಲೇ ವಿಶ್ವನಾಥ ದೇವಸ್ಥಾನ ಮತ್ತು ಅಯೋಧ್ಯೆಗೆ ಭೇಟಿ ನೀಡುವುದಾಗಿ ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸಿನಿಮಾದಿಂದ ದೂರ : ಸಿನಿಮಾದಿಂದ ದೂರ ಸರಿದ ಅವರು 25 ವರ್ಷಗಳ ಬಳಿಕ ಮುಂಬೈಗೆ ಮರಳಿದರು. ಅವರು ಸನಾತನ ಸಂಸ್ಥೆಯಲ್ಲಿ ನಂಬಿಕೆ ಹೊಂದಿದ್ದಾರೆ. ಡ್ರಗ್​ ಮಾಫಿಯಾದೊಂದಿಗೆ ಅವರು ನಂಟು ಹೊಂದಿರುವ ಆರೋಪ ಎದುರಿಸುತ್ತಿದ್ದ ಅವರು, ಇತ್ತೀಚೆಗಷ್ಟೇ ಇದರಿಂದ ಕ್ಲೀನ್​ಚಿಟ್​ ಪಡೆದಿದ್ದರು. ಇದೀಗ ಎಲ್ಲವನ್ನು ತೊರೆದಿರುವ ನಟಿ ಯೋಗ ಮತ್ತು ಧ್ಯಾನದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಮಹಾಕುಂಭಮೇಳದ ಮೊನಾಲಿಸಾಗೆ ಚಲನಚಿತ್ರದ ಆಫರ್: ಯಾರೀ ಬೆಡಗಿ?

ಇದನ್ನೂ ಓದಿ: ಸಂಭಲ್​ನಲ್ಲಿ ರಾಮ ಸೀತೆ ಕೆತ್ತನೆಯ ನಾಣ್ಯಗಳು ಪತ್ತೆ: ಇದರ ಕಾಲಮಾನ ಯಾವುದು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.