ETV Bharat / sports

'ಹಾಗೆ ಮಾಡಿದಕ್ಕೆ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಚಹಾಲ್​': ಎಲ್ಲರೆದುರೆ ಸಾರಿ ಕೇಳಿದ ಅರ್ಷದೀಪ್​​! - ARSHDEEP SINGH

Arshdeep Singh: ಟೀಂ ಇಂಡಿಯಾದ ಸ್ಟಾರ್​ ಬೌಲರ್​ ಅರ್ಷದೀಪ್​ ಸಿಂಗ್, ಯುಜ್ವೇಂದ್ರ ಚಹಾಲ್​ಗೆ ಸಾರಿ ಕೇಳಿರುವ ವಿಡಿಯೋ ವೈರಲ್​ ಆಗಿದೆ. ​

ARSHDEEP SINGH SORRY TO CHAHAL  YUZVENDRA CHAHAL  ARSHDEEP SINGH T20 WICKETS  YUZVENDRA CHAHAL DIVORCE NEWS
ARSHDEEP SINGH Say SORRY TO CHAHAL (IANS)
author img

By ETV Bharat Sports Team

Published : Jan 25, 2025, 1:43 PM IST

ಹೈದರಾಬಾದ್​: ಟೀಂ ಇಂಡಿಯಾದ ಸ್ಟಾರ್​​ ಸ್ಪಿನ್ನರ್​ ಯುಜ್ವೇಂದ್ರ ಚಹಾಲ್​ಗೆ ವೇಗಿ ಅರ್ಷದೀಪ್​ ಸಿಂಗ್​ ಕ್ಷಮೆ ಕೇಳಿದ್ದಾರೆ. ಎರಡು ಕಿವಿಗಳನ್ನು ಹಿಡಿದು ಕ್ಷಮಿಸುವಂತೆ ಕೇಳಿದ್ದು ಇದರ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇಷ್ಟಕ್ಕೆ ಚಹಾಲ್​ ಬಳಿ ಸಾರಿ ಕೇಳುವಂತಹ ತಪ್ಪು ಅರ್ಷದೀಪ್​ ಏನು ಮಾಡಿದ್ದಾರೆ ಮತ್ತು ಏಕೆ ಕ್ಷಮೆ ಕೇಳಿದ್ದಾರೆ ಎಂದು ಇದೀಗ ತಿಳಿಯೋಣ.

ವಾಸ್ತವಾಗಿ, ಬುಧವಾರ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಸ್ಟಾರ್ ವೇಗಿ ಅರ್ಷದೀಪ್ ಸಿಂಗ್ ಎರಡು ವಿಕೆಟ್ ಪಡೆದು ತಮ್ಮ ಶಕ್ತಿ ಪ್ರದರ್ಶಿಸಿ ದಾಖಲೆಯನ್ನು ಬರೆದಿದ್ದರು. ಇದರೊಂದಿಗೆ ಭಾರತದ ಪರ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಗೆ ಪಾತ್ರರಾದರು. ಈ ಅನುಕ್ರಮದಲ್ಲಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (96 ವಿಕೆಟ್) ದಾಖಲೆ ಮುರಿದರು.

ಅರ್ಷದೀಪ್ ಕೇವಲ 61 ಪಂದ್ಯಗಳಲ್ಲಿ 97 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಸ್ತುತ ಟಿ20ಯಲ್ಲಿ ಭಾರತದ ಅಗ್ರ ಬೌಲರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಚಹಾಲ್ 80 ಪಂದ್ಯಗಳನ್ನು ಆಡಿ 96 ವಿಕೆಟ್ ಪಡೆದಿದ್ದರು. ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಅವರ ವಿಕೆಟ್‌ ಪಡೆಯುತ್ತಿದ್ದಂತೆ ಅರ್ಷದೀಪ್​ ಈ ಸಾಧನೆ ಮಾಡಿದರು. ಅರ್ಷದೀಪ್​ ಪ್ರತಿ ಎರಡು ಓವರ್‌ಗಳಲ್ಲಿ 17.90ರ ಸರಾಸರಿಯಲ್ಲಿ ವಿಕೆಟ್ ಪಡೆಯುತ್ತಿದ್ದಾರೆ.

ಮೊದಲ ಪಂದ್ಯದ ಬಳಿಕ ಮಾತನಾಡಿದ ಅರ್ಷದೀಪ್, ಚಾಹಲ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಕ್ಕಾಗಿ ಕ್ಷಮೆಯಾಚಿಸಿದರು (ತಮಾಷೆಗೆ). ಪಂದ್ಯದ ಬಳಿಕ ಬಿಸಿಸಿಐ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅರ್ಷದೀಪ್ ಚಹಾಲ್​ಗೆ ಸಾರಿ ಕೇಳಿದರು. ಚಹಾಲ್​ ಭಾಯ್​ ರೇಕಾರ್ಡ್​ ಮುರಿದಕ್ಕೆ ಕ್ಷಮಿಸಿ ಎಂದು ಎರಡು ಕಿವಿಗಳನ್ನು ಹಿಡಿದು ಸಾರಿ ಎಂದಿದ್ದು ಈ ವಿಡಿಯೋ ಭಾರೀ ವೈರಲ್​ ಆಗಿದೆ.

100ರ ಕ್ಲಬ್​ಗೆ ಸಮೀಪ: ಟಿ20 ಫಾರ್ಮಟ್​ನಲ್ಲಿ ಬೆಸ್ಟ್​ ಬೌಲರ್​ ಎನಿಸಿಕೊಂಡಿರುವ ಅರ್ಷದೀಪ್​ 100 ವಿಕೆಟ್​ಗಳ ಗಡಿ ತಲುಪುವ ಹಂತದಲ್ಲಿದ್ದಾರೆ. ಇನ್ನು ಮೂರು ವಿಕೆಟ್​ ಪಡೆದರೆ ಅವರಿಗೆ ಇನ್ನು ಮೂರು ವಿಕೆಟ್​ಗಳು ಬೇಕಾಗಿವೆ. ಇನ್ನು ನಾಲ್ಕು ಪಂದ್ಯಗಳು ಬಾಕಿ ಇರುವ ಕಾರಣ ಅರ್ಷದೀಪ್​ ಈ ಸರಣಿಯಲ್ಲಿ 100 ಟಿ20 ವಿಕೆಟ್​ಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚಿದೆ. ನಿರಂತರ ಉತ್ತಮ ಪ್ರದರ್ಶನ ನೀಡುತ್ತಿರುವ ಅರ್ಷದೀಪ್​ ಅವರನ್ನು ಮುಂಬರುವ ಚಾಂಪಿಯನ್ಸ್​ ಟ್ರೋಫಿಗೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಐಸಿಸಿ ವರ್ಷದ ಅತ್ಯುತ್ತಮ ಟೆಸ್ಟ್ - ಏಕದಿನ​ ತಂಡ ಪ್ರಕಟ: ಮೂವರು ಭಾರತೀಯರಿಗೆ ಸ್ಥಾನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.