ಶಿಡ್ಲಘಟ್ಟಕ್ಕೆ ಟಿಕೆಟ್ ಕೊಡಪ್ಪ.. ನಾಗರಹಾವು ಕಂಡು ಎದ್ದುಬಿದ್ದು ಓಡಿ ಹೋದ ಬಸ್ ಪ್ರಯಾಣಿಕರು
🎬 Watch Now: Feature Video
ನಾಗರಹಾವೊಂದು ಕೆಎಸ್ಆರ್ಟಿಸಿ ಬಸ್ ಏರಿ ಅವಾಂತರ ಸೃಷ್ಟಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಶಿಡ್ಲಘಟ್ಟ ವೃತ್ತದಲ್ಲಿ ನಡೆದಿದೆ. ನಿನ್ನೆ ಸಂಜೆ ನಾಗರಹಾವೊಂದು ಗಾಬರಿಯಲ್ಲಿ ದಾರಿ ಕಾಣದೆ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಮಾರ್ಗವಾಗಿ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹತ್ತಿದ್ದು, ಹಾವು ನೋಡಿದ ಪ್ರಯಾಣಿಕರು ಹಾಗೂ ಚಾಲಕ ಗಾಬರಿಗೊಂಡು ಬಸ್ನಿಂದ ಇಳಿದು ಓಡಿದ್ದಾರೆ. ನಂತರ ಚಾಲಕ ಮತ್ತು ಸ್ಥಳೀಯರು ಉರಗ ತಜ್ಞ ಪೃಥ್ವಿರಾಜ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ಪೃಥ್ವಿರಾಜ್ ಹಾಗೂ ಸ್ಥಳೀಯರು ಬಸ್ನಲ್ಲಿ ಇದ್ದ ನಾಗರಹಾವಿಗಾಗಿ ಹುಡುಕಾಟ ನಡೆಸಿದರು. ಬಸ್ ಇಂಜಿನ್ ಮೇಲಿದ್ದ ಬ್ಯಾನೆಟ್ನಲ್ಲಿ ಹಾವು ನುಗ್ಗಿರುವುದು ಗೊತ್ತಾಗಿದೆ. ಬಸ್ ಚಾಲಕ ಹಾಗು ಸ್ಥಳೀಯರ ಸಹಾಯ ಪಡೆದು ಉರಗತಜ್ಞ ಪೃಥ್ವಿರಾಜ್ ಹರಸಾಹಸದಿಂದ ನಾಗರಹಾವನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಹಾವನ್ನು ರಕ್ಷಿಸಿದ ಪೃಥ್ವಿರಾಜ್ಗೆ ಪ್ರಯಾಣಿಕರು ಹಾಗು ಸ್ಥಳೀಯರು ಅಭಿನಂದನೆ ಸಲ್ಲಿಸಿದರು.
Last Updated : Feb 3, 2023, 8:27 PM IST