ETV Bharat / state

ಇಂದು ದಾಸಶ್ರೇಷ್ಠ ಕನಕದಾಸ ಜಯಂತಿ: ಹರಿದಾಸನ ಇತಿಹಾಸ, ಕೃತಿಗಳ ಮಾಹಿತಿ ತಿಳಿಯಿರಿ

ಇಂದು ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಕನಕದಾಸರ 537ನೇ ಜನ್ಮದಿನ. ಕನಕದಾಸರ ಹಿನ್ನೆಲೆ, ನಾಡಿಗೆ ಅವರು ಕೊಟ್ಟ ಕೊಡುಗೆಯ ಮಾಹಿತಿ ಇಲ್ಲಿದೆ.

ಕನಕದಾಸರ ಜಯಂತಿ
ಕನಕದಾಸರ ಜಯಂತಿ (ETV Bharat)
author img

By ETV Bharat Karnataka Team

Published : 3 hours ago

ಹಾವೇರಿ: ದಾಸ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಶ್ರೀ ಕನಕದಾಸರ 537ನೇ ಜಯಂತಿಯನ್ನು ಇಂದು ರಾಜ್ಯದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಬಾಡ ಜನ್ಮಭೂಮಿ ಕಾಗಿನೆಲೆ ಕರ್ಮಭೂಮಿ; ದಾಸಶ್ರೇಷ್ಠ ಕನಕದಾಸರು 1509 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಬಚ್ಚಮ್ಮ ಮತ್ತು ಬೀರಪ್ಪ ಎಂಬ ದಂಪತಿಯ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಬಾಡ ಗ್ರಾಮ ಕನಕದಾಸರ ಜನ್ಮಭೂಮಿಯಾದರೆ, ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ. ವಿಜಯನಗರ ಅರಸರ ಆಡಳಿತದಲ್ಲಿ ದಂಡನಾಯಕನಾಗಿದ್ದ ತಿಮ್ಮಪ್ಪ ನಾಯಕನಿಗೆ ಚಿನ್ನ ಸಿಕ್ಕಿದ್ದರಿಂದ ಕನಕನಾಗುತ್ತಾನೆ. ನಂತರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಕಂಡ ಹಿಂಸೆಯಿಂದ ಕನಕ ಕನಕದಾಸರಾಗುತ್ತಾರೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಉಭಯ ಸಂತರು ದಾಸ ಪರಂಪರೆಯಲ್ಲಿ ಅಜರಾಮರರಾಗಿ ಉಳಿದವರು. ಅದರಲ್ಲಿ ಕನಕದಾಸರು ನಾಡು ಕಂಡ ಅಪ್ರತಿಮ ದಾಸರಾಗಿದ್ದು ದಾಸಶ್ರೇಷ್ಠ ಎಂದೆನಿಸಿಕೊಂಡವರು. ಇಂತಹ ಕನಕದಾಸರು ಇಂದಿನ ವಿದ್ಯಮಾನಗಳನ್ನು ಐದು ಶತಮಾನಗಳ ಮುಂಚೆ ತಮ್ಮ ಕೃತಿಗಳಲ್ಲಿ ಪ್ರಸ್ತುತಪಡಿಸಿದ್ದರು.

ಸಮಾಜದ ಅಂಕುಡೊಂಕು ತಿದ್ದಿದ ಕನಕದಾಸರು; ಅವರು ರಚಿಸಿದ ಕೃತಿಗಳು ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಪ್ರಸ್ತುತ ದಿನಗಳಲ್ಲಿಯೂ ಸಹ ಸಮಾಜದ ಸಾಮಾಜಿಕ ಜಾಗೃತಿಗೆ ಪ್ರಮುಖ ಪಾತ್ರ ವಹಿಸುತ್ತವೆ. 1509 ರಲ್ಲಿ ಜನಿಸಿದ್ದ ಕನಕದಾಸರು 1609 ರಲ್ಲಿ ಕಾಗಿನೆಲೆಯಲ್ಲಿ ಇಹಲೋಕ ತ್ಯಜಿಸಿದರು. ಸಮಾಜದ ಒಳಿತಿಗಾಗಿ ಅವರು ಮಾಡಿದ ಸೇವೆ ಕಂಡು ಕಾಗಿನೆಲೆಯಲ್ಲಿ ಅವರ ಗದ್ದುಗೆ ಕೂಡ ನಿರ್ಮಿಸಲಾಗಿದೆ. ಅಂದು ಕನಕದಾಸರು ರಚಿಸಿದ ನಳಚರಿತ್ರೆ, ಮೋಹನತರಂಗಿಣಿ, ರಾಮಧಾನ್ಯ ಚರಿತ ಮತ್ತು ಹರಿಭಕ್ತಿಸಾರ ಕೃತಿಗಳು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾಗಿವೆ. ಅವರು ಕಾಗಿನೆಲೆ ಆದಿಕೇಶವನ ಅಂಕಿತನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.

ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ಪ್ರಾಧಿಕಾರ ಕನಕದಾಸರ ಜೀವನಗಾಥೆ ಸಾರುವ ಸ್ಮಾರಕಗಳನ್ನ ರಕ್ಷಿಸುತ್ತಿದೆ. ಕನಕದಾಸ ಜೀವನಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಕನಕದಾಸರ ಜನ್ಮಭೂಮಿ ಬಾಡ ಮತ್ತು ಕರ್ಮಭೂಮಿ ಕಾಗಿನೆಲೆಯಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ.

ಬಾಡದಲ್ಲಿ ಕನಕದಾಸರ ಅರಮನೆ ನಿರ್ಮಾಣವಾಗಿದ್ದರೆ, ಕಾಗಿನೆಲೆಯಲ್ಲಿ ಪರಿಸರ ಉದ್ಯಾನವನ, ಕಾಗಿನೆಲೆ ದ್ವಾರಗೋಪುರ, ಕನಕದಾಸರ ಗದ್ದುಗೆ ಕನಕ ಚೆನ್ನಕೇಶವ ದೇವಸ್ಥಾನ ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಕಾಗಿನೆಲೆ ಮತ್ತು ಬಾಡ ಗ್ರಾಮಗಳನ್ನು ಪ್ರವಾಸಿತಾಣವಾಗಿಸಲು ಪ್ರಾಧಿಕಾರ ಶ್ರಮಿಸುತ್ತಿದೆ. ಪ್ರಾಧಿಕಾರ ಈಗಾಗಲೇ ಕನಕದಾಸರ ಕುರಿತಂತೆ ವಿವಿಧ ಪುಸ್ತಕಗಳನ್ನು ಪ್ರಕಟಿಸಿದೆ. ಜೊತೆಗೆ ಸಿಡಿ ಸೇರಿದಂತೆ ಆಧುನಿಕ ತಂತ್ರಜ್ಞಾನದ ಮೂಲಕ ಕನಕದಾಸರ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ.

ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಶ್ರೀ ಮಾತನಾಡಿ, "ಸಮಸ್ತ ಕರ್ನಾಟದ ಜನತೆ ಕನಕದಾಸರ ಜಯಂತಿ ಶುಭಾಶಯಗಳು. ರಾಜ್ಯ ಸರ್ಕಾರ ಕನಕದಾಸರ ಜಯಂತಿಯಂದು ರಜೆ ಘೋಷಣೆ ಮಾಡಿ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನಕದಾಸರ ಭಾವಚಿತ್ರ ಇಟ್ಟು ಅವರ ಜಯಂತಿ ಆಚರಿಸಬೇಕು ಮತ್ತು ಅವರ ತತ್ವ ಆದರ್ಶಗಳನ್ನು ನಾಡಿನ ಜನತೆ ಪಸರಿಸುವ ಕೆಲಸ ಮಾಡಬೇಕು" ಎಂದು ಮನವಿ ಮಾಡಿದರು.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರವಿ ಮಾತನಾಡಿ, "ಇಂದು ಕನಕದಾಸರ 537ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ಕನಕದಾಸರ ಜಯಂತಿ ಶುಭಾಶಗಳನ್ನು ಕೋರುತ್ತಿದ್ದೇನೆ. ಕನಕದಾಸರು ಸಮಾಜ ಸುಧಾರಣೆ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಅವರ ತತ್ವ ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ" ಎಂದರು.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕರಾದ ಜಗನ್ನಾಥ​ ಮಾತನಾಡಿ, "ಕನಕದಾಸರ ಕುರಿತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ 50ಕ್ಕೂ ಹೆಚ್ಚು ಕೃತಿಗಳನ್ನು ಮತ್ತು 12 ಸಿಡಿಗಳನ್ನು ಹೊರ ತಂದಿದೆ. ಇತ್ತೀಚಿಗೆ ಕನಕದಾಸರ ಏಳು ದಂಡಕಗಳು ಸಿಕ್ಕಿವೆ. ಅವುಗಳನ್ನು ಡಾ. ಟಿ.ಎನ್​ ನಾಗರತ್ನ ಅವರು ಮದ್ರಣಗೊಳಿಸಿದ್ದಾರೆ. ಇಲ್ಲಿಯವರೆಗೆ 78 ಕನಕದಾಸರ 14 ಸಾಲಿನ ಪಂದ್ಯಗಳು ದೊರೆತಿವೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರಾಜ್ಯಮಟ್ಟದ ದನ ಬೆದರಿಸುವ ಸ್ಪರ್ಧೆ ಆಯೋಜನೆ : ಸಾವಿರಾರು ಹೋರಿಗಳು ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.