ತುಮಕೂರು: ಆಹಾರ ಅರಸಿ ಕೋಳಿ ಫಾರಂಗೆ ನುಗ್ಗಿದ ಆರಡಿ ಉದ್ದದ ನಾಗರಹಾವು- ವಿಡಿಯೋ - ತುಮಕೂರಿನಲ್ಲಿ ನಾಗರಹಾವಿನ ರಕ್ಷಣೆ
🎬 Watch Now: Feature Video
ತುಮಕೂರು : ಕೋಳಿ ಫಾರಂನಲ್ಲಿ ಮೊಟ್ಟೆ, ಕೋಳಿ ಮರಿಗಳನ್ನು ತಿನ್ನಲು ಬಂದಿದ್ದ ನಾಗರಹಾವನ್ನು ವಾರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಜಾಗೃತ ಸಂಸ್ಥೆಯ ಉರಗ ತಜ್ಞ ದಿಲೀಪ್ ಸುರಕ್ಷಿತವಾಗಿ ಸೆರೆ ಹಿಡಿದರು. ನಗರದ ಹೊರವಲಯದಲ್ಲಿರುವ ಬೆಳ್ಳಾವಿ ಗ್ರಾಮದ ನಿವಾಸಿ ನರಸಿಂಹಮೂರ್ತಿ ಎಂಬವರ ಕೋಳಿ ಶೆಡ್ಡಿನಲ್ಲಿ ಸುಮಾರು 6 ಅಡಿ ಉದ್ದದ ನಾಗರ ಕಾಣಿಸಿಕೊಂಡಿತ್ತು. ಹಾವು ಕಂಡ ಅವರು ವಾರಂಗಲ್ ವನ್ಯಜೀವಿ ತಂಡಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ದೇವರಾಯನ ದುರ್ಗಾ ಅರಣ್ಯಪ್ರದೇಶಕ್ಕೆ ಬಿಟ್ಟರು.
ಕಾಳಿಂಗ ಸೆರೆ: ಒಂದು ವರ್ಷದಿಂದ ಗದ್ದೆಯಲ್ಲೇ ಮನೆ ಮಾಡಿಕೊಂಡಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಹರೀಂದ್ರ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕೋಡಿಹಿತ್ಲು ಸಮೀಪದ ಹೊಸೂರು ಗ್ರಾಮದಲ್ಲಿ ಚಿದಂಬರ ಹೆಬ್ಬಾರ್ ಎಂಬವರ ಗದ್ದೆಯಲ್ಲಿ ಆ. 12ರಂದು ಘಟನೆ ನಡೆದಿತ್ತು.