ಜಮ್ಮು - ಕಾಶ್ಮೀರದಲ್ಲಿ ಯೋಧ ಪ್ರಾಂಜಲ್ ವೀರಮರಣ: ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ
🎬 Watch Now: Feature Video
Published : Nov 24, 2023, 5:11 PM IST
|Updated : Nov 24, 2023, 11:00 PM IST
ಬೆಂಗಳೂರು: ಹುತಾತ್ಮ ಯೋಧ ಪ್ರಾಂಜಲ್ ಅವರಿಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಅವರ ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ನಮನ ಸಲ್ಲಿಸಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತೆರಳಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ರಜೌರಿ ಸೆಕ್ಟರ್‌ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 63ನೇ ರಾಷ್ಟ್ರೀಯ ರೈಫಲ್ಸ್‌ನ 29 ವರ್ಷದ ಯೋಧ ಪ್ರಾಂಜಲ್ ಅವರು ಹುತಾತ್ಮರಾಗಿದ್ದರು. ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು ರಾತ್ರಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ನಂತರ ಅವರ ಪಾರ್ಥಿವ ಶರೀರವನ್ನು ಬನ್ನೇರುಘಟ್ಟದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಮೃತ ಯೋಧ ಪ್ರಾಂಜಲ್ ಪಾರ್ಥಿವ ಶರೀರ ಆಗಮನ ಹಿನ್ನೆಲೆ ಸೂಕ್ತ ವ್ಯವಸ್ಥೆ ಮಾಡದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ರಾಜ್ಯದ ಯೋಧ ಸಾವನ್ನಪ್ಪಿದ್ದಾರೆ. ಇವತ್ತು ಅವರ ಪಾರ್ಥಿವ ಶರೀರ ನಗರಕ್ಕೆ ಬರ್ತಿದೆ. ನಮ್ಮ ಗೃಹ ಸಚಿವರು ಹೋಗ್ತಿದ್ದಾರೆ. ನನಗೆ ಸಮಯ ಸಿಕ್ಕರೆ ಹೋಗ್ತೀನಿ. ಪರಿಹಾರ ಏನು ಕೊಡಬೇಕೊ ಕೊಡ್ತೀವಿ. ರಾಜ್ಯದ ಗೃಹ ಸಚಿವರೇ ಹೋಗ್ತಿದ್ದಾರೆ. ರಾಜ್ಯಪಾಲರು ಹೋಗ್ತಾರೆ, ನಾನು ಸಮಯ ಮಾಡ್ಕೊಂಡು ಹೋಗುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇಶ ಕಾಯುವಂತವರು ಅವರು. ನಮಗೆ ರಕ್ಷಣೆ ನೀಡುವವರು ಅವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೋರುತ್ತೇನೆ ಎಂದರು.
ಇದನ್ನೂ ಓದಿ : ಇಂದು ರಾತ್ರಿ ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ ಶರೀರ ಬೆಂಗಳೂರಿಗೆ: ನಾಳೆ ಸಾರ್ವಜನಿಕ ದರ್ಶನ, ಅಂತ್ಯಕ್ರಿಯೆ