ಮೈಸೂರಲ್ಲಿ ಸಿಎಂ ನೂತನ ಮನೆ ನಿರ್ಮಾಣ.. ಕಟ್ಟಡ ಕಾರ್ಯ ವೀಕ್ಷಿಸಿದ ಸಿದ್ದರಾಮಯ್ಯ
🎬 Watch Now: Feature Video
ಮೈಸೂರು : ನಗರದ ಕುವೆಂಪು ನಗರದ ಬಳಿ ಇರುವ ವಿಶ್ವ ಮಾನವ ಜೋಡಿರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೂತನ ಮನೆ ನಿರ್ಮಾಣವಾಗುತ್ತಿದೆ. ಸೋಮವಾರ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿ ಕಟ್ಟಡವನ್ನು ವೀಕ್ಷಣೆ ಮಾಡಿದರು. ನಿರ್ಮಾಣ ಮಾಡುತ್ತಿರುವ ಇಂಜಿನಿಯರ್ಗೆ ಕೆಲವು ಸಲಹೆ ನೀಡಿದರು. ತಮ್ಮ ತವರು ಜಿಲ್ಲೆಯಲ್ಲಿ ಸಿಎಂ ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಮೂರು ಅಂತಸ್ತಿನ ಮನೆ ಇದಾಗಿದ್ದು, ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ತಮ್ಮ ಹಿರಿಯ ಮಗ ದಿವಂಗತ ರಾಕೇಶ್ ಅವರ ಪುಣ್ಯತಿಥಿಗೆ ಸಿದ್ದರಾಮಯ್ಯ ಆಗಮಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ತೋಟದ ಮನೆಯಿಂದ ನೇರವಾಗಿ ಕುವೆಂಪು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ಇಂಜಿನಿಯರ್ ಜೊತೆ ತೆರಳಿ ವೀಕ್ಷಿಸಿದರು. ಹುಟ್ಟೂರು ಸಿದ್ದರಾಮನ ಹುಂಡಿಯಲ್ಲಿ ಸ್ವಂತ ಮನೆ ಹೊಂದಿರುವ ಸಿದ್ದರಾಮಯ್ಯ ಮೈಸೂರಿನಲ್ಲಿ ಮನೆಯನ್ನು ಹೊಂದಿಲ್ಲ. ಮೈಸೂರಿಗೆ ಬಂದಾಗಲೆಲ್ಲ ತಮ್ಮ ಸ್ನೇಹಿತರ ಮನೆಯಲ್ಲೇ ತಂಗುತ್ತಿದ್ದರು. ಹೆಚ್ ಡಿ ಕೋಟೆ ರಸ್ತೆಯಲ್ಲಿರುವ ಟಿ ಕಾಟೂರು ಬಳಿ ತೋಟದ ಮನೆಯನ್ನು ಮಾತ್ರ ಹೊಂದಿದ್ದಾರೆ. ಮೈಸೂರು ನಗರದಲ್ಲಿ ಇದೀಗ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ಐದಾರು ತಿಂಗಳಿನಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: 'ನೀನು ಯಾರೆಂದು ಗೊತ್ತಿಲ್ಲ..': ಶಾಸಕ ಗೋಪಾಲಕೃಷ್ಣ ಬೇಳೂರು-ಅಜ್ಜಿಯ ಮಾತುಕತೆ ವಿಡಿಯೋ ವೈರಲ್