ಮೇಘಸ್ಫೋಟಕ್ಕೆ ಪಿಥೋರಗಢದ ಖೋಟಿಲಾ ತತ್ತರ..ಭಾರಿ ವಿನಾಶ - ಮನೆಗಳು ಕುಸಿದು ಹಲವು ಮಂದಿ ನಾಪತ್ತೆ
🎬 Watch Now: Feature Video

ಪಿಥೋರಗಢ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಭಾರಿ ಹಾನಿಯಾಗಿದೆ. ಶುಕ್ರವಾರ ರಾತ್ರಿ ಧಾರ್ಚುಲಾದ ಮಾರುಕಟ್ಟೆ ಹಾಗೂ ಹಲವು ಮನೆಗಳಿಗೆ ಗುಡ್ಡ ಕೊಚ್ಚಿಕೊಂಡು ಬಂದು ಹಾನಿ ಮಾಡಿದೆ. ಮಲ್ಲಿ ಬಜಾರ್, ಗ್ವಾಲ್ ಗ್ರಾಮ ಮತ್ತು ಖೋಟಿಲ ರಸ್ತೆಗಳಲ್ಲಿ, ಮಾರುಕಟ್ಟೆಗೆ ಹೋಗುವ ರಸ್ತೆಯೂ ಕಸದಿಂದ ಆವೃತವಾಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳೂ ಅವಶೇಷಗಳಡಿ ಹೂತು ಹೋಗಿವೆ. ಮನೆಗಳು ಕುಸಿದು ಹಲವು ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇತ್ತೀಚೆಗಷ್ಟೇ ಎಲ್ಧರ್ ಎಂಬ ಸ್ಥಳದಲ್ಲಿ ಭೂಕುಸಿತ ಸಂಭವಿಸಿ, ನಾಲ್ಕು ಮನೆಗಳು ನೆಲಸಮವಾಗಿವೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದೆ. ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಅಲರ್ಟ್ ಆಗಿದ್ದಾರೆ.
Last Updated : Feb 3, 2023, 8:27 PM IST