ತುಮಕೂರು: ಪಾರಿವಾಳಕ್ಕಾಗಿ ಲಾಂಗ್ ಹಿಡಿದ ಯುವಕರ ಗ್ಯಾಂಗ್.. ಪೊಲೀಸರಿಂದ ಬಂಧನ - ಕೊರಟಗೆರೆ ಪೊಲೀಸ್ ಠಾಣೆಯ ಪಿಎಸ್ಐ ಚೇತನ್
🎬 Watch Now: Feature Video
Published : Sep 21, 2023, 5:52 PM IST
ತುಮಕೂರು : ಪಾರಿವಾಳ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆಯಲ್ಲಿ ನಡೆದಿದೆ. ಸಂಜು ಎಂಬುವನು 2 ಸಾವಿರ ರೂಪಾಯಿಗೆ ಅಜಯ್ ಎಂಬುವನಿಂದ ಪಾರಿವಾಳ ಖರೀದಿಸಿದ್ದ. ಪಾರಿವಾಳ ಪಡೆಯುವ ವೇಳೆ ಮುಂಗಡ 800 ರೂ. ನೀಡಿದ್ದ ಸಂಜು, ಉಳಿದ ಹಣ 1200 ರೂ. ಅಜಯ್ಗೆ ನೀಡಬೇಕಿತ್ತು.
ಉಳಿದ ಹಣ ಕೇಳಿದ್ದಕ್ಕೆ ಸಂಜು ಆಕ್ರೋಶಗೊಂಡು ಲಾಂಗ್ ಸಹಿತ ಅಜಯ್ ಬಳಿ ಹೋಗಿ ಹಲ್ಲೆಗೆ ಮುಂದಾಗಿದ್ದಾನೆ. ಸಂಜು ಸೇರಿ ಆರು ಮಂದಿ ಯುವಕರು ಅಜಯ್ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಅಡ್ಡ ಬಂದ ಅಜಯ್ ಭಾವ ಸಂಪತ್ ಕೈಗೆ ಗಂಭೀರ ಗಾಯವಾಗಿದೆ. ಕೊರಟಗೆರೆ ಆಸ್ಪತ್ರೆಗೆ ದಾಖಲಿಸಿ ಸಂಪತ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ, ಪುಂಡಾಟ ಮೆರೆದಿದ್ದ ಗ್ಯಾಂಗ್ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ನೇತೃತ್ವದಲ್ಲಿ ಆರೋಪಿಗಳ ಬಂಧನವಾಗಿದೆ.
ಇದನ್ನೂ ಓದಿ: ಭಟ್ಕಳ: ದುಬಾರಿ ಬೆಲೆಯ 25 ಪಾರಿವಾಳ ಕದ್ದವನ ಬಂಧನ