ಮದ್ಯ ಮತ್ತು ರಸ್ತೆ ಬಗ್ಗೆ ಶಿಕ್ಷಣ ಸಚಿವರ ವಿವಾದಾತ್ಮಕ ಹೇಳಿಕೆ: ವಿಡಿಯೋ ನೋಡಿ

By

Published : Sep 1, 2022, 8:46 PM IST

Updated : Feb 3, 2023, 8:27 PM IST

thumbnail
ಬಲರಾಂಪುರ (ಉತ್ತರ ಪ್ರದೇಶ) : ಜಿಲ್ಲೆಯ ವಡ್ರಾಫ್‌ನಗರ ಡೆವಲಪ್‌ಮೆಂಟ್ ಬ್ಲಾಕ್‌ನಡಿ ಮದ್ಯ ವ್ಯಸನ ನಿರ್ಮೂಲನಾ ಅಭಿಯಾನ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಪ್ರೇಮ್ ಸಾಯಿ ಟೇಕಂ ಅವರು ಮದ್ಯ ಮತ್ತು ರಸ್ತೆ ಕುರಿತು ನೀಡಿದ ಹೇಳಿಕೆ ವಿಡಿಯೋ ವೈರಲ್ ಆಗಿದೆ. ಚುನಾವಣಾ ಸಮಯದಲ್ಲಿ ನಾವೂ ಮದ್ಯ ಸೇವಿಸುತ್ತೇವೆ ಎಂದು ಹೇಳಿರುವ ಅವರು ಮಂದಿರ ಹಾಗೂ ಮಸೀದಿಯನ್ನು ಬೇರೆ ಬೇರೆ ಮಾಡುತ್ತೇವೆ ಎಂದಿದ್ದಾರೆ. ಈ ಹೇಳಿಕೆಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗೆಯೇ ‘ರಸ್ತೆಗಳು ಹದಗೆಟ್ಟಾಗ ಜನರು ದುರಸ್ತಿಗೆ ಆಗ್ರಹಿಸುತ್ತಾರೆ. ಆದರೆ, ಹದಗೆಟ್ಟ ರಸ್ತೆಗಳಲ್ಲಿ ಅಪಘಾತಗಳು ಅಪರೂಪ. ಉತ್ತಮ ರಸ್ತೆಗಳಲ್ಲಿಯೇ ಹೆಚ್ಚು ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.