Tiger viral video: ಮಳೆ ನೀರು ಕುಡಿದು ದಣಿವಾರಿಸಿಕೊಂಡ ವ್ಯಾಘ್ರ: ಬಂಡೀಪುರದಲ್ಲಿ ಸೆರೆಸಿಕ್ಕ ದೃಶ್ಯ ನೋಡಿ - ಚಾಮರಾಜನಗರ ಮಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/26-07-2023/640-480-19099374-thumbnail-16x9-news.jpg)
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ತುಂತುರು ಮಳೆಯಾಗುತ್ತಿದೆ. ಬಂಡೀಪುರ ಅರಣ್ಯ ಪ್ರದೇಶದಲ್ಲೂ ವರ್ಷಧಾರೆ ಮುಂದುವರಿದಿದೆ. ಈ ನಡುವೆ ಅರಣ್ಯ ರಸ್ತೆ ಮಾರ್ಗದಲ್ಲಿ ಶೇಖರಣೆಯಾಗಿದ್ದ ಮಳೆ ನೀರು ಕುಡಿದು ಹುಲಿಯೊಂದು ದಣಿವಾರಿಸಿಕೊಂಡ ದೃಶ್ಯ ದೊರೆತಿದೆ.
ವಿಡಿಯೋ ವೈರಲ್: ಈ ದೃಶ್ಯ ಬಂಡೀಪುರ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವ್ಯಾಘ್ರನ ಹತ್ತಿರದಿಂದ ಕಂಡ ಸಫಾರಿಗರು ರೋಮಾಂಚನಗೊಂಡಿದ್ದಾರೆ. ಈ ವಿಡಿಯೋವನ್ನು ಬಂಡೀಪುರ ಸಫಾರಿಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ಸಿಎಫ್ಒ ರಮೇಶ್ ಕುಮಾರ್ ದೃಢಪಡಿಸಿದ್ದಾರೆ.
ಮೂರು ಹುಲಿಗಳ ದರ್ಶನ: ಚಾಮರಾಜನಗರ ತಾಲೂಕಿನ ಕ್ಯಾತದೇವರ ಗುಡಿ (ಕೆ.ಗುಡಿ) ರಾಜ್ಯದ ಪ್ರಮುಖ ಪ್ರವಾಸಿ ತಾಣ. ಕೆಲ ದಿನಗಳ ಹಿಂದೆ ಇಲ್ಲಿ ಸಫಾರಿಗರಿಗೆ ಮೂರು ಹುಲಿಗಳು ಒಟ್ಟೊಟ್ಟಿಗೆ ದರ್ಶನ ನೀಡಿದ್ದವು. ಕೆ.ಗುಡಿ ಪ್ರದೇಶ ಸಮೃದ್ಧ ವನ್ಯಸಂಪತ್ತು ಹೊಂದಿರುವ ಸ್ಥಳ. ಪ್ರಕೃತಿ ಸೌಂದರ್ಯ ಮತ್ತು ವನ್ಯಜೀವಿಗಳ ದರ್ಶನ ಪಡೆಯಲು ಪ್ರಶಸ್ತ ತಾಣ. ಇಲ್ಲಿ ಮೂರು ಹುಲಿಗಳು ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.
ಇದನ್ನೂ ಓದಿ: ರಸ್ತೆಯಲ್ಲಿ ಅಮ್ಮ ಮಕ್ಕಳ ಸವಾರಿ: ಕೆ.ಗುಡಿಯಲ್ಲಿ ಹುಲಿಗಳ ದರ್ಬಾರ್ ನೋಡಿ