ರೈತರ ಮೂಗಿಗೆ ತುಪ್ಪ ಸವರಿದಂತೆ ಕೇಂದ್ರ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ನಿಗದಿಪಡಿಸಿದೆ: ಕುರುಬೂರು ಶಾಂತಕುಮಾರ್ - ಕಬ್ಬು ಬೆಳೆಗಾರರ ಸಂಘ
🎬 Watch Now: Feature Video
ಮೈಸೂರು: ಕಬ್ಬಿನ ಉತ್ಪಾದನಾ ವೆಚ್ಚ ಶೇಕಡಾ 25ರಷ್ಟು ಏರಿಕೆ ಆಗಿದೆ. ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರವನ್ನು ಕೇವಲ ಶೇ 3ರಷ್ಟು ಏರಿಕೆ ಮಾಡಿರುವುದು ರೈತರ ಮೂಗಿಗೆ ತುಪ್ಪ ಸವರಿದಂತಾಗಿದೆ. ಕೂಡಲೇ ಕಬ್ಬಿಗೆ ಹೆಚ್ಚಿನ ಎಫ್‌ಆರ್‌ಪಿ ನಿಗದಿ ಮಾಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ರೈತರ ಕಬ್ಬಿನ ಉತ್ಪಾದನೆ ವೆಚ್ಚ ಶೇಕಡಾ 25ರಷ್ಟು ಏರಿಕೆ ಆಗಿದೆ. ಇದರಲ್ಲಿ ಕಬ್ಬಿನ ಕಠಾವಿನ ಕೂಲಿ, ಸಾಗಣೆ ವೆಚ್ಚ ಸಾವಿರ ರೂಪಾಯಿ ಆಗಿದೆ. ರಸಗೊಬ್ಬರದ ಬೆಲೆ ಚೀಲಕ್ಕೆ 500 ರೂಪಾಯಿ ಆಗಿದೆ. ಕಬ್ಬು ಟನ್ಗೆ ಕೇವಲ 100 ರೂಪಾಯಿ ಏಕೆ ಹೆಚ್ಚು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಒಂದು ಟನ್ ಕಬ್ಬಿನ ಸಿಪ್ಪೆಯನ್ನು 3,300 ರೂಪಾಯಿಯಂತೆ ಅಣಬೆ ಬೇಸಾಯಕ್ಕೆ ಖರೀದಿ ಮಾಡುತ್ತಾರೆ. ಅದಕ್ಕಿಂತ ಏಕೆ ಕಡಿಮೆ ಎಫ್‌ಆರ್‌ಪಿ ದರ ನಿಗದಿ ಮಾಡಿದ್ದೀರಿ. ಇದು ಯಾವ ನ್ಯಾಯ?. ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 4,000 ರೂಪಾಯಿ ನಿಗದಿ ಮಾಡಬೇಕೆಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.