ತುಪ್ಪರಿಹಳ್ಳಕ್ಕೆ ಶಾಶ್ವತ ಪರಿಹಾರ: ನಿಟ್ಟುಸಿರು ಬಿಟ್ಟ ನವಲಗುಂದ ತಾಲೂಕಿನ ಜನ
🎬 Watch Now: Feature Video
ಹುಬ್ಬಳ್ಳಿ : ರೈತರು ಬೆಳೆದ ಬೆಳೆಗಳಿಗೆ ಕಂಟಕವಾಗಿ ಪರಿಣಮಿಸಿದ್ದ ನವಲಗುಂದ ತಾಲ್ಲೂಕಿನ ತುಪ್ಪರಿಹಳ್ಳದ ಹೂಳೆತ್ತುವ ಮತ್ತು ತಡೆಗೋಡೆ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಮಳೆಗಾಲದಲ್ಲಿ ತುಪ್ಪರಿಹಳ್ಳದ ನೀರು ಜಮೀನಿಗೆ ನುಗ್ಗಿ ರೈತರು ಬೆಳೆದ ಬೆಳೆಗಳು ಕೊಚ್ಚಿಹೋಗುತ್ತಿತ್ತು. ಆದರೆ ಸದ್ಯ ಹಳ್ಳದ ಪರಿಸ್ಥಿತಿ ಬದಲಾಗಿದ್ದು, ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ. ಜೊತೆಗೆ ಜಮೀನಿಗೆ ನೀರು ನುಗ್ಗಿ ಬೆಳೆಹಾನಿ ಉಂಟಾಗುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಧಾರವಾಡ ಐಐಟಿ ಉದ್ಘಾಟನೆಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 312 ಕೋಟಿ ಅನುದಾನದಲ್ಲಿ ತುಪ್ಪರಿಹಳ್ಳದ ಶಾಶ್ವತ ಪರಿಹಾರಕ್ಕೆ ಚಾಲನೆ ನೀಡಿದ್ದರು. ಚಾಲನೆ ನೀಡಿದ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಿದ್ದು, ಗ್ರಾಮಸ್ಥರ ಹಾಗೂ ರೈತ ಶಾಶ್ವತ ಪರಿಹಾರದ ಕನಸು ನನಸಾಗಿದೆ. 150 ಕೋಟಿ ವೆಚ್ಚದಲ್ಲಿ ಮೊದಲ ಹಂತ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ಸಿಸಿ ತಡೆಗೋಡೆ, ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಿಂದ ಆರಂಭವಾಗುವ ತುಪ್ಪರಿಹಳ್ಳವು ನವಲಗುಂದದಲ್ಲಿ ಹಲವು ಸಮಸ್ಯೆಗಳನ್ನು ಉಂಟು ಮಾಡುತ್ತಿತ್ತು. ಇದರಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜಾನುವಾರುಗಳು ನೀರು ಪಾಲಾಗಿವೆ. ಅಲ್ಲದೆ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ. ತುಪ್ಪರಿಹಳ್ಳದ ಸಮಸ್ಯೆ ಅರಿತಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, 2010ರಲ್ಲಿ ಈ ಹಳ್ಳವನ್ನು ಜಲಸಂಪನ್ಮೂಲ ಇಲಾಖೆಗೆ ಸೇರುವಂತೆ ಮಾಡಿದರು. ಇದೀಗ ತುಪ್ಪರಿಹಳ್ಳದ ಶಾಶ್ವತ ಪರಿಹಾರದ ಕಾಮಗಾರಿಗೆ 312 ಕೋಟಿ ವೆಚ್ಚದ ಮೊದಲ ಹಂತದಲ್ಲಿ 150 ಕೋಟಿ ಕಾಮಗಾರಿ ಆರಂಭವಾಗಿದೆ.
ಇದನ್ನೂ ಓದಿ : ಮೋಟಾರ್ ರಿಪೇರಿ ಮಾಡುವ ವೇಳೆ ಜಾರಿ ಬಿದ್ದು ಇಬ್ಬರು ಕಾರ್ಮಿಕರ ಸಾವು!