ನಿಲ್ಲಿಸಿದ್ದ ಕಾರುಗಳ ಮೇಲೆ ಕಲ್ಲು ತೂರಿ ಕಿಡಿಗೇಡಿಗಳಿಂದ ಪುಂಡಾಟ.. ಮತ್ತೊಂದೆಡೆ ಮುಖಕ್ಕೆ ಪಂಚ್ ಮಾಡಿ ಪರಾರಿ! - ಬಾಣಸವಾಡಿಯ ಕಲ್ಯಾಣನಗರ
🎬 Watch Now: Feature Video

ಬೆಂಗಳೂರು : ನಗರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಪುಂಡರ ಆಟಾಟೋಪ ಮುಂದುವರೆದಿದೆ. ರೆಸಿಡೆನ್ಷಿಯಲ್ ಏರಿಯಾದಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಕಲ್ಲುತೂರಾಟ ಮಾಡಿ ಗಾಜು ಪುಡಿಮಾಡಿರುವ ಘಟನೆ ತಡರಾತ್ರಿ ಶ್ರೀನಿವಾಸ ನಗರದಲ್ಲಿ ನಡೆದಿದೆ. ರಾತ್ರಿ 2:50ರ ಸುಮಾರಿಗೆ ಬೈಕಿನಲ್ಲಿ ಬಂದಿದ್ದ ಇಬ್ಬರು ಕಿಡಿಗೇಡಿಗಳು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಸುಮಾರು ಆರು ಕಾರುಗಳ ಗಾಜುಗಳ ಮೇಲೆ ಕಲ್ಲುತೂರಿ ಪರಾರಿಯಾಗಿದ್ದಾರೆ. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನಾ ಸ್ಥಳಕ್ಕೆ ಹನುಮಂತನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಖಾಸುಮ್ಮನೆ ಅಂಗಡಿ ಸಿಬ್ಬಂದಿಗೆ ಪಂಚ್: ಅಂಗಡಿ ಸಿಬ್ಬಂದಿ ಮೇಲೆ ಯುವಕರಿಬ್ಬರು ಹಲ್ಲೆ ಮಾಡಿರುವ ಘಟನೆ ಫೆಬ್ರವರಿ 23ರ ಸಂಜೆ ಬಾಣಸವಾಡಿಯ ಕಲ್ಯಾಣನಗರದಲ್ಲಿ ನಡೆದಿದೆ. ಕಲ್ಯಾಣ ನಗರದ ಚಟ್ ಪಟಾ ಟೀ ಅಂಗಡಿ ಸಿಬ್ಬಂದಿ ಅಂಗಡಿ ಮುಂದೆ ನಿಂತಿದ್ದಾಗ ಬಂದ ಇಬ್ಬರು ಯುವಕರು ಇದ್ದಕ್ಕಿದ್ದಂತೆ ಮುಖಕ್ಕೆ ಪಂಚ್ ಮಾಡಿ ತೆರಳಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Video ನೋಡಿ... ಮುಳುಗುತ್ತಿದ್ದ ಬೋಟ್ನಿಂದ ನಾಲ್ವರು ಮೀನುಗಾರರ ರಕ್ಷಣೆ