400 ಅಡಿ ಆಳ ಕಂದಕಕ್ಕೆ ಬಿದ್ದ ಬಸ್: ಓರ್ವ ಮಹಿಳೆ ಸಾವು, 18 ಮಂದಿಗೆ ಗಾಯ - ಗಣಪತಿ ಪಾಯಿಂಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/12-07-2023/640-480-18976689-thumbnail-16x9-lek.jpg)
ನಾಸಿಕ್ (ಮಹಾರಾಷ್ಟ್ರ) : ಜಿಲ್ಲೆಯ ಸಪ್ತಶೃಂಗಿ ಗಡ್ ಬಳಿ ರಾಜ್ಯ ಸಾರಿಗೆ ಬಸ್ವೊಂದು 400 ಅಡಿ ಆಳದ ಕಂದಕಕ್ಕೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿ 20 ರಿಂದ 25 ಪ್ರಯಾಣಿಕರಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಸಪ್ತಶೃಂಗಿ ಘಾಟಿಯಿಂದ ಖಮಗಾಂವ್ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಇಂದು ಬೆಳಗ್ಗೆ ದುರಂತ ಸಂಭವಿಸಿತು.
ಇಲ್ಲಿನ ಗಣಪತಿ ಪಾಯಿಂಟ್‌ನಿಂದ ನೇರವಾಗಿ ಕಣಿವೆಗೆ ಬಸ್ ಉರುಳಿದೆ. ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಪ್ತಶೃಂಗಿ ದೇವಿ ಟ್ರಸ್ಟ್, ಪೊಲೀಸ್ ಅಧಿಕಾರಿಗಳು, ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿತು. ಬೆಳಗ್ಗೆ 6:50ರ ಸುಮಾರಿಗೆ ಅಪಘಾತ ಸಂಭವಿಸಿದೆ. 18 ಮಂದಿ ಗಾಯಗೊಂಡಿದ್ದು, ಸಮೀಪದ ವಾಣಿ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೀಡಾದ ಬಸ್ ಖಮಗಾಂವ್ ಅಗರಕ್ಕೆ ಸೇರಿದ್ದು, ನಿನ್ನೆ ಬೆಳಗ್ಗೆ 8.30ಕ್ಕೆ ಸಪ್ತಶೃಂಗಿಗೆ ತೆರಳಿತ್ತು. ರಾತ್ರಿ ಅಲ್ಲಿಯೇ ತಂಗಿದ್ದು, ಇಂದು ಮುಂಜಾನೆ ಸಪ್ತಶೃಂಗಿ ಗಡ್‌ನಿಂದ ಖಮ್‌ಗಾಂವ್ (ಬುಲ್ಧಾನ) ಗೆ ಪ್ರಯಾಣ ಬೆಳೆಸಿದೆ. ವಾಣಿಯ ಸಪ್ತಶೃಂಗಿ ಕೋಟೆಯಿಂದ ಕೆಳಗಿಳಿಯುತ್ತಿದ್ದಂತೆ ಬಸ್ ಕಣಿವೆಗೆ ಬಿದ್ದಿದೆ.
ಇದನ್ನೂ ಓದಿ : Watch video: ಎರಡು ಬೈಕ್ಗಳ ನಡುವೆ ಭೀಕರ ರಸ್ತೆ ಅಪಘಾತ; ಬೈಕ್ ಸವಾರರು ಪಾರಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ