10 ಲಕ್ಷ ರೂಪಾಯಿಗೆ ಮಾರಾಟವಾದ ಹಳ್ಳಿಕಾರ್ ಎತ್ತು 'ಬ್ರಾಂಡ್ ಅಪ್ಪಣ್ಣ'!- ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಮಂಡ್ಯ: ಶ್ರೀರಂಗ ಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ರೈತರೊಬ್ಬರು ಸಾಕಿದ್ದ ಎತ್ತು 10 ಲಕ್ಷ 25 ಸಾವಿರ ರೂಪಾಯಿಗೆ ಮಾರಾಟವಾಗಿದೆ. ವಿನು ಎಂಬವರಿಂದ ಚಿಕ್ಕಮಗಳೂರಿನ ತೇಗೂರು ಮಂಜಣ್ಣ ದುಬಾರಿ ಬೆಲೆ ಕೊಟ್ಟು ಎತ್ತು ಖರೀದಿ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ನಡೆದ ಎತ್ತಿನ ಗಾಡಿ ರೇಸ್‌ನಲ್ಲಿ ಭಾಗವಹಿಸಿದ್ದ ಈ 'ಬ್ರಾಂಡ್ ಅಪ್ಪಣ್ಣ' ಎಂಬ ಹೆಸರಿನ ಎತ್ತು ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. "ಚಿತ್ರನಟ ದರ್ಶನ್ ಕೂಡ ಇದನ್ನು ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಆ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿಲ್ಲ" ಎಂದು ಮಾಲೀಕ ವಿನು ಹೇಳಿದರು.
ಹಳ್ಳಿಕಾರ್ ತಳಿ: ಭಾರತದ ಪ್ರಮುಖ ಗೋ ತಳಿಗಳಲ್ಲಿ ಒಂದಾಗಿರುವ ಹಳ್ಳಿಕಾರ್ ಅಳಿವಿನಂಚಿನಲ್ಲಿದೆ. ಇದನ್ನು 'ಕೆಲಸಗಾರ ತಳಿ' ಎಂದೂ ಕರೆಯಲಾಗುತ್ತದೆ. ದಿನಕ್ಕೆ 40 ರಿಂದ 50 ಮೈಲಿಯ ವರೆಗೂ ವಿಶ್ರಾಂತಿ ಪಡೆಯದೆ ಈ ಎತ್ತು ಕ್ರಮಿಸಬಲ್ಲದು. ಕ್ವಿಂಟಲ್‌ಗಟ್ಟಲೆ ಭಾರ ಎಳೆಯಬಲ್ಲ ಸಾಮರ್ಥ್ಯ ಇದಕ್ಕಿದೆ.
ಇದನ್ನೂ ಓದಿ: ವಿದ್ಯುತ್ ತಂತಿ ಹರಿದು ಬಿದ್ದು 11 ಜಾನುವಾರುಗಳ ದುರ್ಮರಣ - ವಿಡಿಯೋ