ಬಡ್ಡಿ ಹಣ ಪಾವತಿಸಲು ವಿಳಂಬ.. ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ: ವಿಡಿಯೋ ವೈರಲ್ - ಮಾರಣಾಂತಿಕ ಹಲ್ಲೆ
🎬 Watch Now: Feature Video
ಬೆಂಗಳೂರು: ಪಡೆದ ಸಾಲಕ್ಕೆ ಬಡ್ಡಿ ಹಣ ಕೊಡಲಿಲ್ಲ ಎಂದು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಭಾನುವಾರ ರಾಜಗೋಪಾಲ್ ನಗರದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಶೋಕ್ ಎಂಬಾತನನ್ನ ನಾಲ್ವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಹಲ್ಲೆಗೊಳಗಾದ ಅಶೋಕ್ ಕೋವಿಡ್ ಸಂದರ್ಭದಲ್ಲಿ ಮಧು ಹಾಗೂ ಪ್ರಮೀಳಾ ದಂಪತಿಯಿಂದ ಒಂದೂವರೆ ಲಕ್ಷ ರೂ. ಸಾಲ ಪಡೆದಿದ್ದನಂತೆ. ಸಾಲದಲ್ಲಿ ಒಂದು ಲಕ್ಷ ಹಣವನ್ನ ಕೋವಿಡ್ ಸಂದರ್ಭದಲ್ಲೇ ಮರುಪಾವತಿ ಮಾಡಿದ್ದ. ಆದರೆ, ಉಳಿದ 50 ಸಾವಿರಕ್ಕೆ ಬಡ್ಡಿ ಪಾವತಿಸುವುದು ತಡವಾಗಿತ್ತು. ಬಡ್ಡಿ ಹಾಗೂ ಹಣ ಎಲ್ಲವೂ ಒಟ್ಟಿಗೆ ಬೇಕು ಎಂದು ಮಧು ಹಾಗೂ ಪ್ರಮೀಳಾ ದಂಪತಿ ಕೇಳಿದ್ದರಂತೆ. ಆದರೆ, ಅಶೋಕ್ ಸದ್ಯಕ್ಕೆ ಪೂರ್ತಿ ಹಣ ಕೊಡಲು ಆಗಲ್ಲ ಎಂದಿದ್ದ. ಹೀಗಾಗಿ ಪ್ರಮೀಳಾ, ಮಧು, ಸಂತೋಷ್ ಸೇರಿ ನಾಲ್ವರು ಅಶೋಕ್ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಹಲ್ಲೆಗೊಳಗಾದ ಅಶೋಕ್ ರಾಜಗೋಪಾಲ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ: ನಾಲ್ಕನೇ ಆರೋಪಿ ಬಂಧಿಸಿದ ಪೊಲೀಸರು