ಖಡ್ಗ ಝಳಪಿಸಿ ಬಿಜೆಪಿ ಶಾಸಕನಿಂದ ನೃತ್ಯ- ವಿಡಿಯೋ - ಜಿಲ್ಲಾ ಪೊಲೀಸ್ ಆಡಳಿತದಿಂದ ತನಿಖೆ ಶುರು
🎬 Watch Now: Feature Video
ಕುಲ್ತಿ (ಪಶ್ಚಿಮ ಬಂಗಾಳ): ಇಲ್ಲಿನ ಕುಲ್ತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಜಯ್ ಪೊದ್ದಾರ್ ಅವರು ರಾಮನವಮಿ ಬಳಿಕ ನಡೆಯುವ ಧಾರ್ಮಿಕ ಕಾರ್ಯಕ್ರಮ ‘ರಾಮ ನವಮಿ ಅಖಾರಾ’ದಲ್ಲಿ ಭಾನುವಾರ ಖಡ್ಗಗಳನ್ನು ಹಿಡಿದು ನೃತ್ಯ ಮಾಡಿದ್ದಾರೆ. ಇಟಪಾರ ಪ್ರದೇಶದಲ್ಲಿ ಪೊದ್ದಾರ್ ಅವರು ಕತ್ತಿಗಳನ್ನು ಹಿಡಿದು ಕುಣಿಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಧಾರ್ಮಿಕ ಮೆರವಣಿಗೆಗಳಲ್ಲಿ ಆಯುಧಗಳನ್ನು ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಖಡ್ಗ ಹಿಡಿದು ನೃತ್ಯ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪೊದ್ದಾರ್, "ನಮ್ಮ ಹಿಂದೂ ದೇವರು ಮತ್ತು ದೇವತೆಗಳು ಕೈಯಲ್ಲಿ ಆಯುಧ ಹಿಡಿದುಕೊಂಡಿದ್ದಾರೆ. ನಾವು ಆಯುಧಗಳನ್ನೂ ಪೂಜಿಸುತ್ತೇವೆ. ರಾಮನವಮಿ ನಂತರ ರಾಮನವಮಿ ಅಖಾರಾ ಆಚರಿಸುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ಪದ್ಧತಿ" ಎಂದು ಹೇಳಿದರು.
ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕ ಜನರು ಪಾಲ್ಗೊಂಡಿದ್ದರು. ಶಾಸಕರ ಕಾರ್ಯವೈಖರಿ ಸರ್ಕಾರದ ಆದೇಶವನ್ನು ಧಿಕ್ಕರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: 'ವಿಶ್ವನಾಯಕನ ವನ್ಯಜೀವಿ ಕಾಳಜಿ': ಮೋದಿ ಬಂಡೀಪುರ ಭೇಟಿಗೆ ಕೆವಿನ್ ಪೀಟರ್ಸನ್ ಮೆಚ್ಚುಗೆ