ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ: ವೋಟ್ ಮಾಡಿ ಭಾರತವನ್ನು ಹೊಗಳಿದ ಶೇಖ್ ಹಸೀನಾ - PM Sheikh Hasina

🎬 Watch Now: Feature Video

thumbnail

By ETV Bharat Karnataka Team

Published : Jan 7, 2024, 12:02 PM IST

ಬಾಂಗ್ಲಾದೇಶ: ದೇಶದ 2024ರ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಸಂಸತ್ತಿನ 300 ಸ್ಥಾನಗಳಿಗೆ ಬೆಳಿಗ್ಗೆ 8 ಗಂಟೆಯಿಂದ ವೋಟಿಂಗ್​ ಆರಂಭವಾಗಿದೆ. ದೇಶಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರಧಾನಿ ಶೇಖ್ ಹಸೀನಾ ಅವರು ಢಾಕಾದಲ್ಲಿ ಮತ ಚಲಾಯಿಸಿದರು.  

ಭಾರತ ನಂಬಿಕಸ್ಥ ಗೆಳೆಯ: ಈ ಸಂದರ್ಭದಲ್ಲಿ ಭಾರತದ ಜೊತೆಗಿನ ದ್ವಿಪಕ್ಷೀಯ ಸಂಬಂಧದ ಕುರಿತು ಮಾತನಾಡಿದ ಹಸೀನಾ, "ಭಾರತದಂತಹ ನಂಬಿಕಸ್ಥ ಗೆಳೆಯನನ್ನು ಪಡೆಯಲು ನಾವು ತುಂಬಾ ಅದೃಷ್ಟವಂತರಾಗಿದ್ದೇವೆ ಎಂದರು. ಇದೇ ವೇಳೆ ಬಾಂಗ್ಲಾ ವಿಮೋಚನಾ ಚಳವಳಿ 1971ರಲ್ಲಿ ಭಾರತ ನೀಡಿದ ಕೊಡುಗೆಯನ್ನು ಅವರು ಸ್ಮರಿಸಿ ಶ್ಲಾಘಿಸಿದರು. "ನಾವು ನಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿದ್ದಾಗ ಭಾರತ ನಮಗೆ ಆಶ್ರಯ ನೀಡಿತು" ಎಂದರು.

ಬಾಂಗ್ಲಾದೇಶದ ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ, 42,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ನಡೆಯುತ್ತಿರುವ ಮತದಾನದಲ್ಲಿ ಒಟ್ಟು 11.96 ಕೋಟಿ ನೋಂದಾಯಿತ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 27 ರಾಜಕೀಯ ಪಕ್ಷಗಳಿಂದ 1,500ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರನ್ನು ಹೊರತುಪಡಿಸಿ 436 ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಜನವರಿ 8ರಂದು ಫಲಿತಾಂಶ ಹೊರಬೀಳಲಿದೆ. ಹಿಂಸಾತ್ಮಕ ಘಟನೆಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.  

ಚುನಾವಣೆ ಬಹಿಷ್ಕರಿಸಿರುವ ಬಿಎನ್‌ಪಿ: ಪ್ರಮುಖ ಪ್ರತಿಪಕ್ಷ, ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಚುನಾವಣೆಯನ್ನು ಬಹಿಷ್ಕರಿಸಿರುವುದರಿಂದ ಪ್ರಧಾನಿ ಹಸೀನಾ ಅವರ ಆಡಳಿತಾರೂಢ ಅವಾಮಿ ಲೀಗ್ ಸತತ ನಾಲ್ಕನೇ ಬಾರಿಗೆ ಗೆಲ್ಲುವ ನಿರೀಕ್ಷೆಯಿದೆ. ಖಲೀದಾ ಭ್ರಷ್ಟಾಚಾರದ ಆರೋಪದ ಮೇಲೆ ಶಿಕ್ಷೆಗೊಳಗಾದ ನಂತರ ಗೃಹಬಂಧನದಲ್ಲಿದ್ದಾರೆ. ಆದ್ದರಿಂದ ಶೇಖ್ ಹಸೀನಾ ಅವರು ಮರು ಆಯ್ಕೆ ಬಹುತೇಕ ಖಚಿತವೆಂದೇ ಹೇಳಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೆ 10 ಬಸ್​ಗಳಿಗೆ ಬೆಂಕಿ; ಮಾಜಿ ಗೃಹ ಸಚಿವನ ಬಂಧನ 

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.