ಶಾಲಾ ಮಕ್ಕಳಿಂದ ರಾಕೆಟ್, ರಾಖಿ ಮಾದರಿಯ ಅಣಕು ಪ್ರದರ್ಶನ- ವಿಡಿಯೋ - ಚಂದ್ರ
🎬 Watch Now: Feature Video


Published : Aug 31, 2023, 9:10 PM IST
ಗಂಗಾವತಿ (ಕೊಪ್ಪಳ): ಇಸ್ರೋ ವಿಜ್ಞಾನಿಗಳ ಸಾಧನೆ ಮತ್ತು ರಕ್ಷಾ ಬಂಧನ ಹಬ್ಬದ ಮಹತ್ವ ಸಾರುವ ಉದ್ದೇಶದಿಂದ ಕಾರಟಗಿ ತಾಲ್ಲೂಕಿನ ರವಿನಗರದ ರೆಡ್ಡಿ ವೀರಣ್ಣ ಸಂಜೀವಪ್ಪ ಶಾಲೆಯ ಮಕ್ಕಳು ಇಂದು ರಾಕೆಟ್, ರಾಖಿ ಆಕೃತಿಗಳ ರಚನಾ ಮಾದರಿಯ ಅಣಕು ಪ್ರದರ್ಶನ ಮಾಡಿ ಗಮನ ಸೆಳೆದರು.
ರಾಕೆಟ್ ಮಾದರಿಯಲ್ಲಿ ಕೆಲವು ವಿದ್ಯಾರ್ಥಿಗಳು ನಿಂತರೆ, ರಾಖಿ ಮಾದರಿಯಲ್ಲಿ ಹಾಗು ಇಸ್ರೋ ಪದ ಸೂಚಿಸುವ ಇಂಗ್ಲಿಷ್ ಅಲ್ಪಾಬೆಟಿಕ್ ಅಕ್ಷರಗಳಲ್ಲಿ ಕೆಲವು ಮಕ್ಕಳು ಸಾಲುಗಟ್ಟಿ ನಿಂತು ವಿಜ್ಞಾನಿಗಳ ಮೂಲಕ, ಭೂಮಿಯಿಂದ ರಾಕೆಟ್ಗೆ ರಾಖಿ ಕಟ್ಟಿ ಅದನ್ನು ಚಂದ್ರನಿಗೆ ತಲುಪಿಸುವ ಸಾಂಕೇತಿಕ ಅಣುಕು ಪ್ರದರ್ಶನ ಮಾಡಿದರು. ಈ ಮೂಲಕ ಭೂಮಿ ಮತ್ತು ಚಂದ್ರನ ಮಧ್ಯೆ ಬಾಂಧವ್ಯ ಬೆಸೆಯುವ ಪ್ರಯತ್ನ ನಡೆಸಿದರು.
ಭೂಮಿ ಮತ್ತು ಚಂದ್ರ ಒಂದೇ ಸೌರಕುಟುಂಬದ ಕಾಯಗಳಾಗಿದ್ದು, ಅವುಗಳ ಮಧ್ಯೆ ಇರುವ ಬಾಂಧವ್ಯವನ್ನು ರೂಪಿಸುವುದಕ್ಕಾಗಿ ಈ ಮಾದರಿಯನ್ನು ಮಕ್ಕಳಿಂದ ರಚಿಸಲಾಗಿದೆ. ಈ ಮೂಲಕ ಹಬ್ಬದ ಮಹತ್ವ ಮತ್ತು ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಾಯಿತು ಎಂದು ಶಾಲೆಯ ಮುಖ್ಯಸ್ಥೆ ಶ್ರೀದೇವಿ ಕೊಲ್ಲಾ ಹೇಳಿದರು.
ಇದನ್ನೂ ಓದಿ : Raksha Bandhan 2023: ಶಾಲಾ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ