90 ಸಾವಿರ ನಾಣ್ಯಗಳನ್ನೇ ನೀಡಿ ಕನಸಿನ ಸ್ಕೂಟರ್​ ಖರೀದಿಸಿದ ವ್ಯಕ್ತಿ: ವಿಡಿಯೋ - ಸ್ಕೂಟರ್​ ಖರೀದಿಗೆ ನಾಣ್ಯ ಸಂಗ್ರಹ

🎬 Watch Now: Feature Video

thumbnail

By

Published : Mar 22, 2023, 2:23 PM IST

ಗುವಾಹಟಿ(ಅಸ್ಸಾಂ): ಸಣ್ಣ ವಹಿವಾಟಿನಲ್ಲಿ ಚಿಲ್ಲರೆ ಸಮಸ್ಯೆ ಸಹಜ. ಆದರೆ, ಇಲ್ಲೊಬ್ಬ ವ್ಯಕ್ತಿ 90 ಸಾವಿರಕ್ಕೂ ಅಧಿಕ ನಾಣ್ಯಗಳನ್ನು ಸಂಗ್ರಹಿಸಿ, ಇದೀಗ ಸ್ಕೂಟರ್​ ಖರೀದಿಸಿದ್ದಾರೆ. ಅಸ್ಸೋಂನ ಗುವಾಹಟಿಯಲ್ಲಿ ಗೂಡಂಗಡಿ ನಡೆಸುತ್ತಿರುವ ಎಂಡಿ ಸೈದುಲ್​ ಹಕೀ ಹಲವು ವರ್ಷಗಳಿಂದ ನಾಣ್ಯಗಳನ್ನು ಸಂಗ್ರಹಿಸಿದಾತ. ತನ್ನದೇ ಹಣದಲ್ಲಿ ಸ್ಕೂಟರ್​ ಖರೀದಿ ಮಾಡಬೇಕು ಎಂಬುದು ಇವರ ಕನಸಾಗಿತ್ತಂತೆ.

ಸೈದುಲ್​ ತಮ್ಮ ಕನಸಿನ ಸ್ಕೂಟರ್​ಗಾಗಿ 6 ವರ್ಷಗಳಿಂದ ಪ್ರತಿದಿನವೂ 1, 2, 10 ರೂಪಾಯಿ ಮೌಲ್ಯದ ನಾಣ್ಯಗಳನ್ನು ಸಂಗ್ರಹಿಸುತ್ತಾ ಬಂದಿದ್ದಾರೆ. ಇದೀಗ ಉಳಿತಾಯದ ಹಣದಲ್ಲಿ ಹೊಸ ಸ್ಕೂಟರ್​ ತಮ್ಮದಾಗಿಸಿಕೊಂಡಿದ್ದಾರೆ. ಸೈದುಲ್​ ಅವರು ಚೀಲದಲ್ಲಿ ಸಂಗ್ರಹಿಸಿದ್ದ ನಾಣ್ಯಗಳ ಸಮೇತ ಬೈಕ್​ ಶೋ ರೂಂಗೆ ಬಂದು, ಸ್ಕೂಟರ್​ ಖರೀದಿಸುವುದಾಗಿ ಅಲ್ಲಿನ ಸಿಬ್ಬಂದಿಗೆ ತಿಳಿಸಿದ್ದಾರೆ. ಶೋರೂಂನಲ್ಲೇ ನಾಣ್ಯಗಳನ್ನು ಹರಡಿದ ಸಿಬ್ಬಂದಿ ಗಂಟೆಗಟ್ಟಲೆ ಎಣಿಸಿ 90 ಸಾವಿರ ರೂ.ಗೆ ಸ್ಕೂಟರ್​ ನೀಡಿದ್ದಾರೆ.

"6 ವರ್ಷಗಳಿಂದ ಸ್ಕೂಟರ್​ ಖರೀದಿಗಾಗಿ ನಾಣ್ಯಗಳನ್ನು ಸಂಗ್ರಹಿಸುತ್ತಾ ಬಂದಿದ್ದೆ. ಈಗ ಖರೀದಿಸಿದ್ದು ನನಗೆ ತುಂಬಾ ಸಂತೋಷವಾಗಿದೆ" ಎಂದು ಸೈದುಲ್ ಹೇಳಿದ್ದಾರೆ. ಆದರೆ, ಈ ಇಷ್ಟು ಹಣವನ್ನು ಎಣಿಸುವಷ್ಟಲ್ಲಿ ಬೈಕ್ ಶೋರೂಂ ಸಿಬ್ಬಂದಿ ಸುಸ್ತಾಗಿದ್ದಾರೆ. ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ವಾಹನದ ಕೀಲಿಯನ್ನು ಸೈದುಲ್​ಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಕೆಫೆ ಹೊರಗೆ ಯುವಕರಿಂದ ಹನುಮಾನ್ ಚಾಲೀಸಾ ಸ್ತುತಿ: ವಿಡಿಯೋ ನೋಡಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.