ಬಿಲಾಸ್‌ಪುರದಲ್ಲಿ ಹಿಟ್ ಅಂಡ್ ರನ್ ಕೇಸ್: ಯುವಕನನ್ನು 20 ಮೀಟರ್ ಎಳೆದೊಯ್ದ ಕಾರು ಚಾಲಕ - young man was hit by a car
🎬 Watch Now: Feature Video
ಛತ್ತೀಸ್‌ಗಢ : ರಾಷ್ಟ್ರ ರಾಜಧಾನಿಯ ಕಾಂಝಾವಾಲಾ ಘಟನೆ ಮಾಸುವ ಮುನ್ನವೇ ಅದೇ ಮಾದರಿಯಲ್ಲೇ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣವೊಂದು ಬಿಲಾಸ್‌ಪುರದಲ್ಲಿ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಬಳಿಕ ಬಾನೆಟ್ ಮೇಲೆ ಬಿದ್ದ ಯುವಕನನ್ನು ಕಾರು ಚಾಲಕ 20 ಮೀ ದೂರ ಎಳೆದೊಯ್ದಿದ್ದಾನೆ.
ನಿನ್ನೆ (ಮಂಗಳವಾರ) ಸಂಜೆ ಶಿವ ಟಾಕೀಸ್ ಚೌಕ್ ಕಡೆಯಿಂದ ತರಬಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಬಸ್ ನಿಲ್ದಾಣದ ಬಳಿ ಕಡೆಗೆ ಕಾರೊಂದು ಬರುತ್ತಿತ್ತು. ಕಾರಿನಲ್ಲಿದ್ದ ಹುಡುಗ ಮತ್ತು ಹುಡುಗಿ ಮಧ್ಯಸೇವನೆ ಮಾಡಿದ್ದರು ಎನ್ನಲಾಗಿದೆ, ಕುಡಿದ ಅಮಲಿನಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಕಾರು ಸವಾರ ಡಿಕ್ಕಿ ಹೊಡೆದಿದ್ದಾನೆ. ನಂತರ ಕಾರನ್ನು ನಿಲ್ಲಿಸುವ ಬದಲು 20 ಮೀಟರ್ ದೂರ ಯುವಕನನ್ನು ಎಳೆದೊಯ್ದಿದ್ದಾನೆ.
ಆದರೆ ಕುಡಿದ ಅಮಿಲಿನಲ್ಲಿದ್ದ ಕಾರು ಚಾಲಕ ಸ್ವಲ್ಪ ದೂರದ ನಂತರ ಕಂಬಕ್ಕೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿದಿದ್ದಾನೆ. ಬಳಿಕ ಅಲ್ಲಿನ ಜನರು ಸ್ಥಳಕ್ಕೆ ಬಂದು ಕಾರು ಚಾಲಕನಿಗೆ ಥಳಿಸಿದ್ದಾರೆ. ಅಷ್ಟೇ ಅಲ್ಲ ಸ್ಥಳೀಯರು ಪೊಲೀಸರಿಗೂ ವಿಷಯ ತಿಳಿಸಿ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಯುವಕ ಪ್ರಾಣಪಾಯದಿಂದ ಪಾರಾಗಿದ್ದು, ಯಾವುದೇ ರೀತಿಯ ಗಾಯಗಳಾಗಿಲ್ಲ. ಈ ಸಂಬಂಧ ತರಬಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರು ಚಾಲಕ ಹಾಗೂ ಆತನೊಂದಿಗೆ ಕುಳಿತಿದ್ದ ಯುವತಿ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೈಕ್ ಮತ್ತು ಕಾರು ನಡುವೆ ಅಪಘಾತ: ಸಹೋದರರು ಸಾವು