ಮಡಿಕೇರಿಯಲ್ಲಿ ಮೈನವಿರೇಳಿಸಿದ ಬೈಕ್ ಸ್ಟಂಟ್: ವಿಡಿಯೋ - etv bharat karnataka

🎬 Watch Now: Feature Video

thumbnail

By ETV Bharat Karnataka Team

Published : Oct 22, 2023, 10:59 PM IST

ಕೊಡಗು: ಮಡಿಕೇರಿಯಲ್ಲಿ ನಾಡಹಬ್ಬ ದಸರಾ ಸಂಭ್ರಮ ಕಳೆಗಟ್ಟಿದ್ದು, ವೈವಿದ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಇಂದು ಮಡಿಕೇರಿಯಲ್ಲಿ ಯುವ ದಸರಾದಲ್ಲಿ ಬೈಕ್ ಸ್ಟಂಟ್ ದೂಳೆಬ್ಬಿಸಿದ್ದು, ಪ್ರೇಕ್ಷಕರಿಗೆ ಮನೊರಂಜನೆಯ ರಸದೌತಣವನ್ನ ನಿಡೀತು. ನಗರದ ಗಾಂಧಿ ಮೈದಾನದಲ್ಲಿಂದು ಯುವ ದಸರಾ ಕಾರ್ಯಕ್ರಮಗಳು ಬೆಳಗಿನಿಂದಲೇ ಆರಂಭವಾಗಿದ್ದವು. ಮುಂಜಾನೆ ಸೈಕಲ್ ಜಾಥದ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು. ನಂತರ ಬೈಕ್ ಸ್ಟಂಟ್‌ ಹಾಗೂ ಸೂಪರ್ ಬೈಕ್​ಗಳ ರ‍್ಯಾಲಿ ನಡೆಯಿತು. ಟೀಮ್ ಪವರ್ ಸ್ಟ್ರೋಕ್ ಕಡೆಯಿಂದ ಸ್ಟಂಟರ್ಸ್​ ಇವೆಂಟ್ ನಡೆಯಿತು.

ಫ್ರೀ ಸ್ಟೀಲ್, ಸ್ಟಾಪಿ, ವಿಲಿಂಗ್, ಡ್ರೀಫ್ಟ್ ಸೇರಿದಂತೆ ನಾನಾ ರೀತಿಯ‌ ಸ್ಟಂಟ್ ಗಳನ್ನ ಮಾಡುವ ಮೂಲಕ‌ ಪ್ರೇಕ್ಷಕರ ಕಣ್ಮನ ಸೆಳೆದರು. ಇದರ ಜೋತೆಗೆ ಸೂಪರ್ ಬೈಕ್ ಗಳು ಕೂಡ ಬೂಮ್ ಬೂಮ್ ಸೌಂಡ್ ಮಾಡುತ್ತಾ ಮಡಿಕೇರಿ ನಗರದಲ್ಲಿ ಒಂದು ರೌಂಡ್ಸ್ ಹಾಕಿದವು. ಸೂಪರ್ ಬೈಕ್​ಗಳಾದ ಆರ್.ಓನ್ 5, ಕವಾಸಕಿ ನಿಂಜ, ಬೆನಿಲಿ 600, ಡುಕಾಟಿ ಹೈಪರ್,‌ RX , ಜಾವ ಬೈಕ್ ಸೇರಿದಂತೆ ಸೂಪರ್ ಬೈಕ್ ಗಳು ಮಡಿಕೇರಿಗರ ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದವು. ಒಂದು ಬಾರಿ ಬೈಕ್ ಹ್ಯಾಂಡಲ್ ಹಿಡಿಯದೆ, ಮತ್ತೊಂದು ಸಲ ಒಂದೇ ಚಕ್ರದಲ್ಲಿ, ಇನ್ನೊಂದು ಸಲ ಹಿಮ್ಮುಖವಾಗಿ, ಮಗದೊಮ್ಮೆ ಸೀಟಿನ ಮೇಲೆ ಕೈ ಕಟ್ಟಿ ಹಾಕಿ ಬೈಕ್ ಚಾಲನೆ ಮಾಡಿದ್ದು ರೋಮಾಂಚಕಾರಿಯಾಗಿತ್ತು.

ಇದನ್ನೂ ಓದಿ: ಮೈಸೂರು ದಸರಾ ಉತ್ಸವದಲ್ಲಿ ಶ್ವಾನ ಪ್ರದರ್ಶನ: ವಿಡಿಯೋ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.