ಪಿರಂಗಿ ಹಾರಿಸಿ, ಗೌರವ ಸೂಚಿಸಿ.. ಪ್ರಧಾನಿ ಮೋದಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ ಅಮೆರಿಕ - ಅಮೆರಿಕ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಮ್
🎬 Watch Now: Feature Video
ವಾಷಿಂಗ್ಟನ್, ಅಮೆರಿಕ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲು ಅಮೆರಿಕ ಪ್ರವಾಸವನ್ನು ಮುಗಿಸಿಕೊಂಡು ಈಜಿಪ್ಟ್‌ನ ಕೈರೋಗೆ ಪ್ರಯಾಣ ಬೆಳೆಸಿದರು. ಈ ವೇಳೆ, ಅಮೆರಿಕ ಸರ್ಕಾರ ಪ್ರಧಾನಿ ಮೋದಿಯನ್ನು ಬಹಳ ಅದ್ಧೂರಿಯಾಗಿ ಮತ್ತು ಗೌರವಗಳೊಂದಿಗೆ ಬೀಳ್ಕೊಟ್ಟರು.
ಇನ್ನು ಅಮೆರಿಕ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಮ್ (ಯುಎಸ್ಐಎಸ್ಪಿಎಫ್) ಸಮಾರಂಭದಲ್ಲಿ ಮಾತನಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾರತೀಯ ವಲಸಿಗರನ್ನು ಭೇಟಿ ಮಾಡಲು ವಾಷಿಂಗ್ಟನ್‌ನ ರೇಗನ್ ಸೆಂಟರ್‌ಗೆ ತೆರಳಿದ್ದರು. ಅಲ್ಲಿ ಮೊದಲಿಗೆ ರೇಗನ್ ಸೆಂಟರ್‌ನಲ್ಲಿ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಗಾಯಕಿ ಮೇರಿ ಮಿಲ್ಬೆನ್ ಭಾರತದ ರಾಷ್ಟ್ರಗೀತೆಯನ್ನು ಹಾಡಿದರು. ಪ್ರಧಾನಿ ಮೋದಿ ರಾಷ್ಟ್ರಗೀತೆಗೆ ಗೌರವ ಸೂಚಿಸಿದರು. ಬಳಿಕ ಭಾರತೀಯ ವಲಸೆಗಾರರನ್ನು ಅಮೆರಿಕಾದಲ್ಲಿ ಮೋದಿ ಖುಷಿ ಪಟ್ಟರು.
ಇನ್ನು ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಮೋದಿ ಅವರು ಸಿಹಿ ಸುದ್ದಿಯನ್ನು ನೀಡಿದರು. ಇನ್ಮುಂದೆ H1B ವೀಸಾ ನವೀಕರಣವನ್ನು ಅಮೆರಿಕಾದಲ್ಲಿಯೇ ಮಾಡಬಹುದು ಎಂದು ಈಗ ನಿರ್ಧರಿಸಲಾಗಿದೆ ಅಂತಾ ಪ್ರಧಾನಿ ಮೋದಿ ಇದೇ ವೇಳೆ ಘೋಷಿಸಿದರು. ಇದನ್ನು ಕೇಳುತ್ತಿದ್ದಂತೆ ಭಾರತೀಯ ವಾಸಿಗಳು ಚಪ್ಪಾಳೆ ತಟ್ಟುವ ಮೂಲಕ ಮೋದಿಯನ್ನು ಗೌರವಿಸಿದರು. ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಅವರು ನೇರ ಏರ್ಪೋರ್ಟ್ನತ್ತ ಪ್ರಯಾಣ ಬೆಳಸಿದರು. ಇಲ್ಲಿ ಅವರಿಗೆ ಪಿರಂಗಿ ಹಾರಿಸಿ, ಗೌರವ ಸೂಚಿಸಿ ಅಮೆರಿಕ ಅದ್ಧೂರಿಯಾಗಿ ಬೀಳ್ಕೊಟ್ಟಿತು.