53 ಬೋಗಿಗಳು ಹಳಿ ತಪ್ಪಿದ್ರೂ ರೈಲ್ವೆ ನಿಲ್ದಾಣದ ಮೂಲಕ ಸಾಗಿದ ಇಂಜಿನ್.. ಭಯಭೀತಗೊಂಡ ಜನ - ಬಿಹಾರದ ಗುರ್ಪಾ ರೈಲು ನಿಲ್ದಾಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16754650-thumbnail-3x2-sefe.jpg)
ಬುಧವಾರ ಮುಂಜಾನೆ ಬಿಹಾರದ ಗುರ್ಪಾ ರೈಲು ನಿಲ್ದಾಣದ ಬಳಿ ಕಲ್ಲಿದ್ದಲು ತುಂಬಿದ ಗೂಡ್ಸ್ ರೈಲಿನ ಕನಿಷ್ಠ 53 ಬೋಗಿಗಳು ಹಳಿತಪ್ಪಿದ್ದು, ರೈಲು ಸಂಚಾರವನ್ನು ಅಸ್ತವ್ಯಸ್ತಗೊಳಿಸಿತ್ತು. ಧನ್ಬಾದ್ ವಿಭಾಗದ ಕೊಡೆರ್ಮಾ ಮತ್ತು ಮನ್ಪುರ್ ರೈಲು ನಿಲ್ದಾಣಗಳ ನಡುವೆ ಬೆಳಗ್ಗೆ 6.24 ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಳಿತಪ್ಪಿ ಬೋಗಿಗಳು ನೆಲಕ್ಕುರುಳಿದ್ರೂ ಸಹ ಇಂಜಿನ್ ಗುರ್ಪಾ ರೈಲು ನಿಲ್ದಾಣದ ಮೂಲಕ ಸಾಗುತ್ತಲೇ ಇತ್ತು. ಈ ದೃಶ್ಯ ನೋಡಿದ ಜನ ಒಂದು ಕ್ಷಣ ಭಯಬೀತರಾದರು. ಈಗ ಹಳಿ ತಪ್ಪಿರುವ ವಿಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.
Last Updated : Feb 3, 2023, 8:30 PM IST