ನಟಿ ಕಂಗನಾ ರಣಾವತ್ರಿಂದ ಸೋಮನಾಥ ಮಹಾದೇವನ ದರ್ಶನ - ವಿಡಿಯೋ - ಸೋಮನಾಥ ಮಹಾದೇವನ
🎬 Watch Now: Feature Video
Published : Nov 3, 2023, 5:37 PM IST
ಗಿರ್ ಸೋಮನಾಥ್(ಗುಜರಾತ್): ನಟಿ ಕಂಗನಾ ರಣಾವತ್ ಇಂದು ಮುಂಜಾನೆ ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾದ ಸೋಮನಾಥ ದೇವಾಲಯವನ್ನು ತಲುಪಿ ಮಹಾದೇವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾದೇವನಿಗೆ ನಟಿ ಕಂಗನಾ ಜಲಾಭಿಷೇಕ ಮಾಡಿದರು. ನಟಿ ಕಂಗನಾ ರಣಾವತ್ ಅವರನ್ನು ಅರ್ಚಕರು ಸ್ವಾಗತಿಸಿದರು.
ಇನ್ನು ಸೋಮನಾಥ ಟ್ರಸ್ಟ್ ಅಧ್ಯಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಮನಾಮ ಯಾಗಕ್ಕೆ ಚಾಲನೆ ನೀಡಿದ್ದರು. ಸೋಮನಾಥದ ರಾಮ ಮಂದಿರದಲ್ಲಿ ರಾಮ ನಾಮ ಬರೆಯುವುದು ಸಹ ನಡೆಯುತ್ತಿದೆ. ಅದರಲ್ಲಿ ಕಂಗನಾ ಕೂಡ ಸೇರಿಕೊಂಡು ರಾಮ, ಸೀತೆ ಮತ್ತು ಲಕ್ಷ್ಮಣನ ಬಳಿ ಇರಿಸಲಾದ ಪುಸ್ತಕದಲ್ಲಿ ರಾಮನಾಮ ಮಂತ್ರವನ್ನು ಬರೆದರು. ರಾಮ್ ನಾಮ್ ಜಾಪ್ ಲೇಖನ ಯಾಗದಲ್ಲಿ ಕಂಗನಾ ರಣಾವತ್ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಬಳಿಕ ಸೋಮನಾಥ ಟ್ರಸ್ಟ್ ಅಧ್ಯಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಯುಗಪುರುಷನಿಗೆ ಹೋಲಿಸಿದ್ದು, ಅವರು ಸನಾತನ ಧರ್ಮದ ಜೊತೆಗೆ ಭಾರತ ಮತ್ತು ಇಡೀ ಜಗತ್ತನ್ನು ಉಳಿಸುತ್ತಿದ್ದಾರೆ. ಜತೆಗೆ ಸೋಮನಾಥ ಮಹಾದೇವನ ದರ್ಶನದಿಂದ ಸಿಗುವ ಶಾಂತಿಯನ್ನು ಪದಗಳಲ್ಲಿ ವರ್ಣಿಸುವುದು ತುಂಬಾ ಕಷ್ಟ ಎಂದರು.
ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ ಶಾರುಖ್ ಖಾನ್! ಮಧ್ಯರಾತ್ರಿ ಮನೆ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳಿಗೆ ದರ್ಶನ-ವಿಡಿಯೋ