ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಯ ದರ್ಶನ ಪಡೆದ ನಟ ದರ್ಶನ್​- ವಿಡಿಯೋ - ಈಟಿವಿ ಭಾರತ ಕರ್ನಾಟಕ

🎬 Watch Now: Feature Video

thumbnail

By

Published : Jun 23, 2023, 7:01 PM IST

ಮೈಸೂರು: ಮೊದಲ ಆಷಾಢ ಶುಕ್ರವಾರವಾದ ಇಂದು ನಾಡದೇವತೆ ಚಾಮುಂಡೇಶ್ವರಿ ತಾಯಿಯ ಸನ್ನಿಧಿಗೆ ನಟ ದರ್ಶನ್ ಆಗಮಿಸಿ ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ದೇವಿಯ ದರ್ಶನಕ್ಕಾಗಿ ಸರತಿಯಲ್ಲಿ ನಿಂತಿದ್ದ ಭಕ್ತರು ಮತ್ತು ಅಭಿಮಾನಿಗಳು ನಟನೊಂದಿಗೆ​ ಕೈ ಕುಲುಕಿ ಸಂತಸಪಟ್ಟರು. ಅಭಿಮಾನಿಗಳು ಫೋಟೋ ತೆಗೆದುಕೊಳ್ಳಲು ಮುಂದಾದಾಗ, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ದೃಶ್ಯ ಕಂಡುಬಂತು.

ಇದನ್ನೂ ಓದಿ: ಶಿವಮೊಗ್ಗ: ಚಂದ್ರಗುತ್ತಿ ದೇವಾಲಯದ ಹುಂಡಿ ಎಣಿಕೆ, ₹29 ಲಕ್ಷ ಸಂಗ್ರಹ

ಮೂಲತಃ ಮೈಸೂರಿನವರೇ ಆದ ದರ್ಶನ್ ಚಾಮುಂಡೇಶ್ವರಿಯ ಪರಮಭಕ್ತರೂ ಹೌದು. ಯಾವುದೇ ಶುಭ ಕೆಲಸಗಳನ್ನು ಮಾಡುವ ಮುನ್ನ ಬೆಟ್ಟದ ಆಗಮಿಸಿ ಮುಂದಿನ ಕೆಲಸಗಳನ್ನು ಮಾಡುವುದನ್ನು ಅವರು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಸಾಮಾನ್ಯ ದಿನಗಳು ಮಾತ್ರವಲ್ಲದೆ ಆಷಾಢ ಶುಕ್ರವಾರ, ವರ್ಧಂತಿ, ಶ್ರಾವಣ ಮಾಸದಲ್ಲಿ ಎಷ್ಟೇ ಕೆಲಸವಿದ್ದರೂ ಸಣ್ಣ ವಿರಾಮ ತೆಗೆದುಕೊಂಡು ತಪ್ಪದೇ ಚಾಮುಂಡಿಯ ದರ್ಶನ ಪಡೆದುಕೊಳ್ಳುತ್ತಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಶ್ರೀಕ್ಷೇತ್ರ ಸೊಗಲ ಸೋಮೇಶ್ವರ ಜಲಪಾತಕ್ಕೆ ಬಂತು ಕಳೆ: ರೈತರಲ್ಲೂ ಹುರುಪು ತಂತು ಮಳೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.