ಹೆದ್ದಾರಿಯಲ್ಲಿ ಆವರಿಸಿದ ಮಂಜು: ಲಾರಿ - ಬಸ್ಗಳ ನಡುವೆ ಸರಣಿ ಅಪಘಾತ, 30 ಮಂದಿಗೆ ಗಾಯ - ಲಾರಿ ಬಸ್ಗಳ ನಡುವೆ ಸರಣಿ ಅಪಘಾತ
🎬 Watch Now: Feature Video
Published : Dec 27, 2023, 10:21 AM IST
ನೆಲಮಂಗಲ : ತುಮಕೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟವಾದ ಮಂಜು ಆವರಿಸಿದೆ. ಪರಿಣಾಮ, ರಸ್ತೆ ಕಾಣದೇ ನಿಂತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬಸ್ನಲ್ಲಿದ್ದ 30 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ.
ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ತೊಣಚಿನಗುಪ್ಪೆ ಬಳಿ ಸರಣಿ ಅಪಘಾತ ಸಂಭವಿಸಿದೆ. 30 ಪ್ರಯಾಣಿಕರಿಗೆ ಗಾಯವಾಗಿದ್ದು, 7 ಜನರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತದಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಬಸ್ ಅನ್ನು ಕ್ರೇನ್ ಮೂಲಕ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ದುರ್ಗಾಂಬ, ಶಿವಗಂಗಾ, ದ್ಯಾನ್ ಹೆಸರಿನ ಖಾಸಗಿ ಬಸ್ಗಳು ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದವು. ಈ ವೇಳೆ, ಲಾರಿಗೆ ದ್ಯಾನ್ ಬಸ್ ಡಿಕ್ಕಿ ಹೊಡೆದಿದೆ. ಅನಂತರ ದ್ಯಾನ್ ಬಸ್ ಚಾಲಕ ಅಪಘಾತವನ್ನು ಕಂಡು ಬಸ್ ಅನ್ನು ರಸ್ತೆಯ ಬದಿಗೆ ಹಾಕುವ ವೇಳೆ ಹಿಂದೆ ಬರುತ್ತಿದ್ದ ಶಿವಗಂಗಾ ಬಸ್ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ : ಹಾವೇರಿ ಪ್ರವಾಸಕ್ಕಾಗಿ ಬಂದಿದ್ದ ರಾಯಚೂರಿನ ಶಾಲಾ ಬಸ್ ಪಲ್ಟಿ: ಮೂವರು ಮಕ್ಕಳು ಸೇರಿ ನಾಲ್ವರಿಗೆ ಗಾಯ