ಬೆಂಗಳೂರಿನ ಬಿಜೆಪಿ ಕಚೇರಿಗೆ ನಾಗಸಾಧುಗಳ ಭೇಟಿ: ವಿಡಿಯೋ - ಬಿಜೆಪಿ ಮಖಂಡರು
🎬 Watch Now: Feature Video
Published : Oct 29, 2023, 7:18 AM IST
ಬೆಂಗಳೂರು: ಬಿಜೆಪಿ ರಾಜ್ಯ ಕಚೇರಿಗೆ ನಾಲ್ವರು ನಾಗಾಸಾಧುಗಳು ಶನಿವಾರ ಸಂಜೆ ಭೇಟಿ ನೀಡಿದ್ದರು. ಮಲ್ಲೇಶ್ವರದ ಜಗನ್ನಾಥ ಭವನದ ಆವರಣಕ್ಕೆ ಆಗಮಿಸಿದ ಅವರಿಗೆ, ಆಸನ ವ್ಯವಸ್ಥೆ ಮಾಡಿ ಉಪಚರಿಸಿ, ದಕ್ಷಿಣೆ ಕೊಟ್ಟು ಕಚೇರಿ ಸಿಬ್ಬಂದಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಬಿಜೆಪಿ ನಾಯಕರು ಯಾರೂ ಇರಲಿಲ್ಲ. ಹೀಗಾಗಿ ನಾಗಾಸಾಧುಗಳು ಕಚೇರಿಯ ಕೆಲ ಸಿಬ್ಬಂದಿ ವರ್ಗದೊಂದಿಗೆ ಮಾತಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ಸಿಬ್ಬಂದಿಯಲ್ಲಿ ಕೆಲವರು ಸಾಧುಗಳ ಕಾಲಿಗೆರಗಿ ನಮಸ್ಕರಿಸಿದರು. ಸಾಧುಗಳಿಗೆ ಹಿಂದಿ ಭಾಷೆ ಬಿಟ್ಟರೆ ಬೇರೆ ಭಾಷೆ ಗೊತ್ತಿರಲಿಲ್ಲ. ಕಚೇರಿ ಸಿಬ್ಬಂದಿ ಮತ್ತು ಸೆಕ್ಯುರಿಟಿ ಗಾರ್ಡ್‌ಗಳಿಗೆ ಹಿಂದಿ ಗೊತ್ತಿದ್ದ ಕಾರಣ ಸಾಧುಗಳನ್ನು ಉಪಚರಿಸುವುದು ತೊಂದರೆಯಾಗಲಿಲ್ಲ.
ಸಾಮಾನ್ಯವಾಗಿ ನಾಗಾಸಾಧುಗಳು ನಗರದಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಾರೆ. ಅವರ ಓಡಾಟ ಹೆಚ್ಚಾಗಿ ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳಲ್ಲಿರುತ್ತದೆ. ಆದರೆ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಗೆ ನಾಗಾಸಾಧುಗಳು ದಿಢೀರ್ ಭೇಟಿ ನೀಡಿದ್ದು, ಆಶ್ಚರ್ಯ ಉಂಟುಮಾಡಿತು. ಬಿಜೆಪಿ ಕಚೇರಿ ಸಿಬ್ಬಂದಿ ಸಾಧುಗಳಿಗೆ ಕುಡಿಯಲು ನೀರು ನೀಡಿದರು. ರಾಜಸ್ಥಾನದಿಂದ ಆಗಮಿಸಿದ್ದ ನಾಗಾಸಾಧುಗಳು ರಾಮೇಶ್ವರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: ಚಂದ್ರಗ್ರಹಣ ಹಿನ್ನೆಲೆ ಸಂಜೆಯೊಳಗೆ ಮುಗಿದ ಚಾಮುಂಡೇಶ್ವರಿ ತೆಪ್ಪೋತ್ಸವ