ಸಬ್ ಇನ್ಸ್ಪೆಕ್ಟರ್ನನ್ನು ಗುಂಡಿಕ್ಕಿ ಕೊಲೆ ಮಾಡಿದ ಅಪರಿಚಿತ ದುಷ್ಕರ್ಮಿಗಳು! - ಪೊಲೀಸ್ ಅಧಿಕಾರಿಯ ಬರ್ಬರ ಕೊಲೆ
🎬 Watch Now: Feature Video
ಫಿರೋಜಾಬಾದ್, ಉತ್ತರ ಪ್ರದೇಶ: ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯ ಬರ್ಬರ ಕೊಲೆ ಆಗಿದೆ. ಅಪರಿಚಿತ ದುಷ್ಕರ್ಮಿಗಳು ಸಬ್ ಇನ್ಸ್ಪೆಕ್ಟರ್ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಫಿರೋಜಾಬಾದ್ ಎಸ್‌ಪಿ ಆಶಿಶ್ ತಿವಾರಿ ಹೇಳಿದ್ದಾರೆ.
"ಅರಾನ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿರುವ ಸಬ್ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್ ಮಿಶ್ರಾ ಅವರು ಗುರುವಾರ ಸಂಜೆ ಚಂದ್‌ಪುರ ಗ್ರಾಮದಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ವರದಕ್ಷಿಣೆ ಪ್ರಕರಣದ ತನಿಖೆಗೆ ಹೋಗಿದ್ದರು ಎಂದರು.
ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಅವರ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ಕುತ್ತಿಗೆ ಭಾಗಕ್ಕೆ ಬುಲೆಟ್ ಏಟು ಬಿದ್ದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ನಮಗೆ ಮಾಹಿತಿ ರವಾನಿಸಿದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದರು.
ಈಗಾಗಲೇ ಪ್ರಕರಣದ ತನಿಖೆ ಮತ್ತು ಅಪರಾಧಿಗಳನ್ನು ಬಂಧಿಸಲು ಬಹು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ವಿರುದ್ಧ ದರೋಡೆಕೋರರ ಕಾಯ್ದೆಯನ್ನು ಜಾರಿಗೊಳಿಸಲಾಗುವುದು. ಆದಷ್ಟು ಬೇಗ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು ಎಂದರು.
ಓದಿ: Bengaluru crime: ಗಂಡ ಹೆಂಡತಿ ಜಗಳ.. ಪತಿ ಕೈಬೆರಳು ಕಚ್ಚಿ ತಿಂದ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ!