ತುಮಕೂರು: ಸಮಾನ ಮನಸ್ಕರಿಂದ ಸಂಭ್ರಮದ ಯುಗಾದಿ ಆಚರಣೆ - ಸೌಹಾರ್ದ ಯುಗಾದಿ ವಿಶೇಷ ಕಾರ್ಯಕ್ರಮ

🎬 Watch Now: Feature Video

thumbnail

By

Published : Mar 23, 2023, 9:12 AM IST

Updated : Mar 23, 2023, 2:04 PM IST

ತುಮಕೂರು: ತುಮಕೂರಿನಲ್ಲಿ ಸೌಹಾರ್ದ ಯುಗಾದಿ ವಿಶೇಷ ಕಾರ್ಯಕ್ರಮ ಆಚರಿಸಲಾಯಿತು. ನಗರದ ಟೌನ್ ಹಾಲ್ ಬಳಿ ಸಮಾನ ಮನಸ್ಕರು, ವಿವಿಧ ಸಮುದಾಯದ ಮುಖಂಡರು ಸೌಹಾರ್ದ ಮತ್ತು ಸಹಬಾಳ್ವೆಗಾಗಿ ಎಂಬ ಘೋಷ ವಾಕ್ಯದೊಂದಿಗೆ ಬೇವು ಬೆಲ್ಲವನ್ನು ಪರಸ್ಪರ ಹಂಚಿ ಸೇವಿಸಿದರು. ಸಾಮಾಜಿಕ ಸೇವಾ ಕಾರ್ಯಕರ್ತರು ಮನೆಯಲ್ಲಿ ತಯಾರಿಸಿ ತಂದಿದ್ದ ಹೋಳಿಗೆ ಹಾಗೂ ಸಿಹಿ ತಿಂಡಿಯನ್ನು ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಶ್ ಅವರು, ''ನಮ್ಮೊಳಗೆ ಯಾವುದೇ ರೀತಿಯ ಬೇದಭಾವ ಇಲ್ಲ. ನಾವು ಸಿಹಿ ಹಾಗೂ ಕಹಿಯನ್ನು ಹಂಚಿ ತಿನ್ನುವವರಾಗಿದ್ದೇವೆ. ಈ ಮೂಲಕ ಪ್ರೀತಿಯಿಂದ ಬದುಕಬೇಕು ಎಂಬ ಗುಣವನ್ನು ನಮ್ಮ ಹಿರಿಯರು ಹುಟ್ಟುಹಾಕಿದ್ದಾರೆ. ಅದನ್ನು ಮುಂದುವರಿಸಿಕೊಂಡು ನಮ್ಮ ಗೆಳೆಯರೆಲ್ಲರೂ ಹೋಗುತ್ತಿದ್ದಾರೆ. ಕೇವಲ ಆಚರಣೆಯಲ್ಲ, ಈ ಹಬ್ಬ ನಮ್ಮ ಬದುಕಿನ ಭಾಗವಾಗಿದೆ'' ಎಂದು ಅಭಿಪ್ರಾಯಪಟ್ಟರು. ''ಸರ್ವ ಜನಾಂಗದವರು ಪ್ರೀತಿಯ ಭ್ರಾತೃತ್ವವನ್ನು ಮತ್ತು ದ್ವೇಷ - ಅಸೂಯೆ ಇಲ್ಲದ ಸಮಾಜವನ್ನು ಕಟ್ಟೋಣ'' ಎಂದು ಅವರು ಹೇಳಿದರು.

ಇದನ್ನೂ ಓದು: ಸೀರೆ ಹಂಚಲು ಬಂದವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ: ವಿಡಿಯೋ ವೈರಲ್

Last Updated : Mar 23, 2023, 2:04 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.