ದಕ್ಷಿಣ ಕನ್ನಡ: ಸುಬ್ರಹ್ಮಣ್ಯ ಸಮೀಪ ಅಸ್ವಸ್ಥಗೊಂಡ ಕಾಡಾನೆ ಸಂಚಾರ: ವಿಡಿಯೋ - ಅರಣ್ಯ ಅಧಿಕಾರಿ ರಾಘವೇಂದ್ರ
🎬 Watch Now: Feature Video
ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಅಸ್ವಸ್ಥಗೊಂಡ ಕಾಡಾನೆಯೊಂದು ಸುಬ್ರಹ್ಮಣ್ಯ ಪರಿಸರದಲ್ಲಿ ಸಂಚಾರ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ ಎಂಬುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಸಂಜೆ 7 ಗಂಟೆಯಿಂದ ರಾತ್ರಿ 1.30 ರ ತನಕ ಸುಬ್ರಹ್ಮಣ್ಯ ಸಮೀಪದ ಚೇರು ಭಾಗದಲ್ಲಿ ಈ ಕಾಡಾನೆ ಅಸ್ವಸ್ಥಗೊಂಡ ರೀತಿಯಲ್ಲಿ ಸಂಚಾರ ಮಾಡಿದೆ. ಇಂದು ಮುಂಜಾನೆ ಮತ್ತೆ ಸುಬ್ರಹ್ಮಣ್ಯ ಸಮೀಪದ ಎರ್ಮಾಯಿಲ್ ಎಂಬಲ್ಲಿ ಬೆಳಗ್ಗೆ 7 ಗಂಟೆಗೆ ರಸ್ತೆಯಲ್ಲೆ ನಡೆದಾಡಲು ಕಷ್ಟಪಡುವ ಕಾಡಾನೆ ಸಾರ್ವಜನಿಕರಿಗೆ ಕಾಣಸಿಕ್ಕಿದೆ. ಈ ಕಾಡಾನೆಯು ತೀರಾ ಅಸ್ವಸ್ಥಗೊಂಡು ಬಳಲಿದಂತೇ ಕಾಣುತ್ತಿದ್ದೂ, ನಡೆಯಲು ಅಸಾಧ್ಯವಾಗಿ ಕಷ್ಟಪಡುತ್ತಿದೆ ಎನ್ನಲಾಗಿದೆ.
ಕಾಡಾನೆಯ ಎಡಗಾಲಿಗೆ ಏನೋ ಬಲವಾದ ಗಾಯಾವಾದಂತೇ ಗೋಚರಿಸುತ್ತಿದ್ದು, ಆನೆಯು ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಮತ್ತು ತಿಂದ ಆಹಾರವನ್ನು ಜಗಿದು ಅಲ್ಲಲ್ಲೆ ಉಗಿದು ಹೋಗುತ್ತಿದೆ ಎಂಬುದಾಗಿಯೂ ಸಾರ್ವಜನಿಕರಿಂದ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅವರು ಈಟಿವಿ ಭಾರತದ ಜೊತೆಗೆ ಮಾತನಾಡಿದ್ದು, ನಿನ್ನೆ ನಮಗೆ ಈ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣವೇ ನುರಿತ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಜೊತೆಗೆ ಆನೆಯ ಚಲನವಲನಗಳನ್ನು ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಸಿಡಿಲು ಬಡಿತಕ್ಕೆ 8 ಹಸು, 4 ಕುರಿಗಳು ಸಾವು