gold World Cup trophy: ಕೇವಲ 0.9 ಗ್ರಾಂ ಚಿನ್ನದಲ್ಲಿ ವಿಶ್ವಕಪ್ ಟ್ರೋಫಿಯ​ ಮಾದರಿ ತಯಾರಿಸಿದ ಅಕ್ಕಸಾಲಿಗ - ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ

🎬 Watch Now: Feature Video

thumbnail

By ETV Bharat Karnataka Team

Published : Oct 13, 2023, 7:13 AM IST

ಅಹಮದಾಬಾದ್​, ಗುಜರಾತ್​: ಕ್ರಿಕೆಟ್ ವಿಶ್ವಕಪ್ 2023 ಪ್ರಾರಂಭವಾಗಿದೆ. ಈ ಟೂರ್ನಮೆಂಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಜನರಲ್ಲಿ ವಿಭಿನ್ನ ಉತ್ಸಾಹವನ್ನು ಕಾಣಬಹುದು. ಆದರೆ ಮೂರನೇ ಬಾರಿಗೆ ಅಹಮದಾಬಾದ್‌ನ ಆಭರಣ ವ್ಯಾಪಾರಿಯೊಬ್ಬರು ಕೇವಲ 0.900 ಗ್ರಾಂ ತೂಕದ ಸುಮಾರು ಒಂದೂವರೆ ಸೆಂ.ಮೀ ಎತ್ತರದ ಚಿನ್ನದ ವಿಶ್ವಕಪ್ ಟ್ರೋಫಿಯ ಮಾದರಿಯನ್ನು ತಯಾರಿಸಿ ಮತ್ತೆ ಸುದ್ದಿಯಾಗಿದ್ದಾರೆ. 

ಅಹಮದಾಬಾದ್‌ನ ಜಮಾಲ್‌ಪುರದಲ್ಲಿ ನೆಲೆಸಿರುವ ರೌಫ್ ಶೇಖ್ ಅವರಿಗೆ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಒಲವು ಹೊಂದಿದ್ದಾರೆ. ರೌಫ್ ಶೇಖ್ 0.900 ಗ್ರಾಂ ಮತ್ತು 22 ಕ್ಯಾರೆಟ್ ಚಿನ್ನದ ಸತತ ಮೂರನೇ ವಿಶ್ವಕಪ್ ಟ್ರೋಫಿಯ ಮಾದರಿಯನ್ನು ವಿನ್ಯಾಸಗೊಳಿಸಿದ್ದಾರೆ. ಇದಕ್ಕೂ ಮುನ್ನ 2015ರಲ್ಲಿ ಮೊದಲ ಬಾರಿಗೆ 1.200 ಗ್ರಾಂದ ವಿಶ್ವಕಪ್​ ಟ್ರೋಫಿ ಮಾಡಿ ಸುದ್ದಿಯಾಗಿದ್ದರು.

2019 ರಲ್ಲೂ ರೌಫ್ ಶೇಖ್ 1 ಗ್ರಾಂ ವಿಶ್ವಕಪ್ ಟ್ರೋಫಿಯನ್ನು ಮಾಡಿದ್ದರು. ಆದರೆ, ಈ ಬಾರಿ ಅಂದರೆ 2023ರಲ್ಲಿ ಅದರ ತೂಕವನ್ನು ಕಡಿಮೆ ಮಾಡಿ ವಿಶ್ವಕಪ್ ಟ್ರೋಫಿಯ ಮಾದರಿಯನ್ನು ಕೇವಲ 0.900 ಗ್ರಾಂ ಚಿನ್ನದಿಂದ ಮಾಡಿ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಇವರಿಗೆ ಚಿನ್ನ ಮತ್ತು ಬೆಳ್ಳಿಯಿಂದ ಸಣ್ಣಪುಟ್ಟ ವಸ್ತುಗಳನ್ನು ತಯಾರಿಸುವ ಹವ್ಯಾಸವೂ ಇದೆ. ಇಲ್ಲಿಯವರೆಗೆ ಬೆಳ್ಳಿಯ ರಥ, ಚಿನ್ನದ ರಾಖಿ, ಚಿನ್ನದ ಗಣಪತಿ ಮೂರ್ತಿ ಇತ್ಯಾದಿಗಳನ್ನು ತಯಾರಿಸಿ ಹೆಸರುವಾಸಿಯಾಗಿದ್ದಾರೆ.

ಕ್ರಿಕೆಟ್ ಪ್ರೇಮಿ ಮತ್ತು ಆಭರಣ ವ್ಯಾಪಾರಿ ರೌಫ್ ಶೇಖ್ ಅವರಿಗೆ ಕ್ರಿಕೆಟ್ ಎಂದ್ರೆ ತುಂಬಾ ಇಷ್ಟಪಡುತ್ತಾರೆ. ಕಡಿಮೆ ತೂಕದ ಚಿನ್ನದ ವಿಶ್ವಕಪ್ ಟ್ರೋಫಿಯನ್ನು ಮಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ದಾಖಲಾಗಬೇಕು ಎಂಬುದು ಅವರ ಆಸೆ. ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ರೌಫ್​ ಶೇಖ್​, ನಾನು 2015ರಲ್ಲಿ 1.200 ಗ್ರಾಂ ವಿಶ್ವಕಪ್​ ಟ್ರೋಫಿಯ ಮಾದರಿ ಮಾಡಿದ್ದೆ. ಬಳಿಕ 2019 ರಲ್ಲೂ 1 ಗ್ರಾಂ ವಿಶ್ವಕಪ್ ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದೆ. ಈ ಬಾರಿ 0.900 ಗ್ರಾಂ ವಿಶ್ವಕಪ್​ ಟ್ರೋಫಿಯ ಮಾದರಿ ತಯಾರಿಸಿದ್ದು, ಈ ಪುಟ್ಟ ವಿಶ್ವಕಪ್​ ಅನ್ನು ಭಾರತ ಮತ್ತು ಪಾಕ್​ ಪಂದ್ಯದ ವೇಳೆ ನಾಯಕ ರೋಹಿತ್​ ಶರ್ಮಾಗೆ ನೀಡಲು ಇಚ್ಛಿಸಿದ್ದೇನೆ ಎಂದು ಹೇಳಿದರು. 

ಓದಿ: ಮಂಗಳೂರು ಏರ್​ಪೋರ್ಟ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,254 ಗ್ರಾಂ ಚಿನ್ನ ವಶಕ್ಕೆ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.