ಡೋಲಿಯಲ್ಲಿ ಮಗು ಹೊತ್ತು ಹರಕೆ ತೀರಿಸಲು ಪಾದಯಾತ್ರೆ ಹೊರಟ ದಂಪತಿ- ವಿಡಿಯೋ - Hiking with a baby in a sack
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17770203-thumbnail-4x3-vny.jpg)
ದಾವಣಗೆರೆ: ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರುವ ಕೊಟ್ಟೂರೇಶ್ವರನಿಗೆ ಹರಕೆ ತೀರಿಸಲು ದಂಪತಿ ತಮ್ಮ ಮಗುವನ್ನು ಡೋಲಿಯಲ್ಲಿ ಹೊತ್ತು ಪಾದಯಾತ್ರೆ ಹೊರಟಿದ್ದಾರೆ. ಸಂತಾನ ಪ್ರಾಪ್ತಿಯಾದರೆ ಹರಕೆ ತೀರಿಸುವುದಾಗಿ ಇವರು ಹರಕೆ ಹೊತ್ತುಕೊಂಡಿದ್ದರಂತೆ. ಅದರಂತೆ ಮಗು ಜನಿಸಿದೆ. ಇದೀಗ ಮಗುವನ್ನು ಡೋಲಿಯಲ್ಲಿರಿಸಿ ಪಾದಯಾತ್ರೆಯ ಮೂಲಕ ಸಾಗುತ್ತಿದ್ದಾರೆ. ಕೊಟ್ಟೂರು ಪಟ್ಟಣದಲ್ಲಿ ನಡೆಯುವ ಕೊಟ್ಟೂರೇಶ್ವರನ ತೇರಿಗೆ ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿ ಹರಕೆ ತೀರಿಸುತ್ತಾರೆ.
ಇದನ್ನೂ ಓದಿ: ಮಾದಪ್ಪನ ಶಿವರಾತ್ರಿ ಜಾತ್ರೆಗೆ ಆಗಮಿಸುತ್ತಿರುವ ಭಕ್ತರು: ಕಾವೇರಿ ನದಿ ದಾಟುತ್ತಿರುವ ಜನ ಸಾಗರ