ಗಂಡಕ್ ನದಿಯಲ್ಲಿ ಈಜಲು ಹೋದ ಐವರು ಹುಡುಗರು ನೀರು ಪಾಲು..! - ಸಾಹೇಬ್‌ಪುರ ಕಮಲ್ ಪೊಲೀಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18429278-thumbnail-16x9-don.jpg)
ಬೇಗುಸರಾಯ್ (ಬಿಹಾರ): ಗಂಡಕ್ ನದಿಯಲ್ಲಿ ಈಜಲು ಹೋಗಿದ್ದ ಐವರು ಹುಡುಗರು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ. ಹುಡುಗರ ಮೃತದೇಹಗಳನ್ನು ಸ್ಥಳೀಯರು ಶೋಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಷ್ಣುಪುರ ಅಹೋಕ್ ಗಂಡಕ್ ನದಿಯಲ್ಲಿ ಈ ಘಟನೆ ಜರುಗಿದೆ. ಒಟ್ಟು 9 ಮಂದಿ ಹುಡುಗರು ಈಜಲು ಹೋಗಿದ್ದರು. ಈ ಪೈಕಿ ನಾಲ್ವರು ಹೊರಗೆ ಬಂದಿದ್ದಾರೆ. ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಗಂಡಕ್ ನದಿಯಲ್ಲಿ ಮುಳುಗಿ ಐವರು ಸಾವು: ಮುಳುಗಿದವರಲ್ಲಿ ಮೂವರು ಬಾಲಕರು, ಮುಂಗೇರ್ ಮತ್ತು ಮಾಧೇಪುರ ಜಿಲ್ಲೆಯವರಾಗಿದ್ದಾರೆ. ಮತ್ತೊಂದೆಡೆ, ಇಬ್ಬರು ಹುಡುಗರು ವಿಷ್ಣುಪುರ ಅಹೋಕ್ ನಿವಾಸಿಗಳು. ಎಲ್ಲ ಬಿಶನ್‌ಪುರ ಗ್ರಾಮದಲ್ಲಿ ನಡೆಯಲಿರುವ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು. ಇದೇ ವೇಳೆ, ಅವರು ಈಜಲು ಗಂಡಕ್ ನದಿಗೆ ಬಂದಿದ್ದ ಈ ಘಟನೆ ನಡೆದಿದೆ. ಈ ಕುರಿತು ಗ್ರಾಮದ ಮುಖಂಡ ಸುಬೋಧ್‌ಕುಮಾರ್ ಮಾತನಾಡಿ, ವಿಷ್ಣುಪುರ ಅಹೋಕ್ ನಿವಾಸಿ ಸುರೇಶ್ ಸಿಂಗ್ ಎಂಬುವರು ಚಂದ್ರವಂಶಿ ಅವರ ಮನೆಯಲ್ಲಿ ನಡೆಯಲಿರುವ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಮದುವೆ ಕಾರ್ಯಕ್ರಮಕ್ಕೂ ಮುನ್ನವೇ ಈ ದುರ್ಘಟನೆ ಜರುಗಿದೆ.
ಗ್ರಾಮದಲ್ಲಿ ನೀರವ ಮೌನ: ಸದ್ಯ ಈ ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಗಂಡಕ್ ನದಿಯ ಘಾಟಿಗೆ ಆಗಮಿಸಿದ ಸಾವಿರಾರು ಜನರು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಿಷ್ಣುಪುರ ಅಹೋಕ್‌ನ ಈ ಗಂಡಕ್ ಘಾಟ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಸೇತುವೆ ಉದ್ಘಾಟನೆಗೆ ಹಲವು ತಿಂಗಳುಗಳ ಮೊದಲು ಕುಸಿದಿದೆ ಎಂಬುದು ಗಮನಾರ್ಹ. ನೀರಿನಲ್ಲಿ ಮುಳುಗಿದವರಲ್ಲಿ ಮುಂಗೇರ್‌ನ ಶಾಸ್ತ್ರಿನಗರ ನಿವಾಸಿ ಸಂಜೀವ್‌ರಾಮ್ ಎಂಬವರ ಪುತ್ರ ಸುಮಾರು 19 ವರ್ಷದ ಗೋಲು ಕುಮಾರ್ ಮತ್ತು ಸುಜಿತ್ ರಾಮ್ ಎಂಬುವವರ ಪುತ್ರ ಹುಲ್ಚುಲ್, ಮಧೇಪುರ ನಿವಾಸಿ ಅಶೋಕ್ ಸಿಂಗ್ ಎಂಬವರ ಪುತ್ರ ರಿಷಭ್ ಕುಮಾರ್ ಎಂಬುವರು ಸೇರಿದ್ದಾರೆ.
ಸದ್ಯ ಕಮಲೇಶ್ ಸಿಂಗ್ ಪುತ್ರ ಛೋಟು ಕುಮಾರ್ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಗ್ರಾಮದ ದಿನೇಶ್ ಸಿಂಗ್ ಎಂಬುವವರ ಪುತ್ರಿ ವಿವಾಹವಾಗಿದ್ದು, ಮೃತ ಛೋಟು ಕುಮಾರ್ ಬಾಲಕಿಯ ಸೋದರ ಸಂಬಂಧಿ ಎಂಬುದು ತಿಳಿದಿದೆ. "ಮೃತರ ವಯಸ್ಸು 14ರಿಂದ 20 ವರ್ಷಗಳು. ಅವರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯವಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದುವರೆಗೆ ಒಂದು ಮೃತ ದೇಹ ಪತ್ತೆಯಾಗಿದೆ ಎಂದು ಗ್ರಾಮದ ಮುಖ್ಯಸ್ಥ ಸುಬೋಧ್ ಕುಮಾರ್ ತಿಳಿಸಿದರು. "ವಧುವಿನ ಸಹೋದರನೂ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ. ಇದರಿಂದ ಮದುವೆ ಕಾರ್ಯಕ್ರಮ ರದ್ದುಗೊಳಿಸಲಾಯಿತು" ಎಂದು ಗ್ರಾಮಸ್ಥರು ತಿಳಿಸಿದರು.
ಇದನ್ನೂ ಓದಿ: ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಗೆ ಪೊಲೀಸ್ ಕಾನ್ಸ್‌ಟೇಬಲ್ ಲೈಂಗಿಕ ದೌರ್ಜನ್ಯ; ಕೆಲಸದಿಂದ ಅಮಾನತು