ಕಣಿವೆ ನಾಡಿನಲ್ಲಿ 400 ಮೀಟರ್ ಉದ್ದದ ತ್ರಿವರ್ಣ ಧ್ವಜ ಹಿಡಿದು ಸಾಗಿದ ಶಾಲಾ ಮಕ್ಕಳು
🎬 Watch Now: Feature Video
ಅನಂತನಾಗ್, ಜಮ್ಮು ಮತ್ತು ಕಾಶ್ಮೀರ: ಸ್ವಾತಂತ್ರ್ಯೋತ್ಸವಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಈ ಸಂಭ್ರಮಕ್ಕೆ ಕಾರಣರಾದವರು ಲೆಕ್ಕವಿಲ್ಲದಷ್ಟು ಸ್ವಾತಂತ್ರ್ಯ ಹೋರಾಟಗಾರರು. ಈಗಾಗಲೇ ಅನೇಕ ಕಡೆ ಸ್ವಾತಂತ್ರ್ಯೋತ್ಸವ ಆಚರಿಸಲು ಸಜ್ಜಾಗುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳು ರ‍್ಯಾಲಿ ಮತ್ತು ಪ್ರಚಾರಗಳು ಕೈಗೊಂಡಿದ್ದಾರೆ.
ಶುಕ್ರವಾರದಂದು ಅನಂತನಾಗ್ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಬೃಹತ್ ತಿರಂಗಾ ರ‍್ಯಾಲಿ ನಡೆಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಶಾಲಾ ಮಕ್ಕಳು 400 ಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ನಗರದ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಈ ರ‍್ಯಾಲಿಯನ್ನು 'ಮೇರಿ ಮಾತಿ ಮೇರಾ ದೇಶ್' ಅಭಿಯಾನದ ಅಡಿ ಆಯೋಜಿಸಲಾಗಿತ್ತು.
ದಕ್ಷಿಣ ಕಾಶ್ಮೀರ ಜಿಲ್ಲೆಯ ವೆರಿನಾಗ್‌ನ ಸದಿವಾರ ಗ್ರಾಮದಲ್ಲಿ ನಡೆದ ಈ ತಿರಂಗಾ ರ‍್ಯಾಲಿಯಲ್ಲಿ ವಿದ್ಯಾರ್ಥಿಗಳಿಗೆ ಅಪಾರ ಸಂಖ್ಯೆಯ ಜನ ಸಾಥ್ ನೀಡಿದ್ದರು. ಸೇನೆ ಮತ್ತು ಪೊಲೀಸರ ನೆರವಿನೊಂದಿಗೆ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. 400 ಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ಹೊತ್ತ ರ‍್ಯಾಲಿಯಲ್ಲಿ ಮಕ್ಕಳು ದೇಶ ಭಕ್ತಿಗೀತೆಗಳನ್ನು ಹಾಡಿದರು. ಮಕ್ಕಳ ಈ ತಿರಂಗ ರ‍್ಯಾಲಿ ಜನರ ಮತ್ತು ಸೇನೆಯ ಮೆಚ್ಚುಗೆ ಪಡೆಯಿತು.
ಓದಿ: ಬಿಹಾರದ ಮುಸ್ಲಿಂ ಕುಟುಂಬಗಳಿಂದ 10 ಸಾವಿರ ರಾಷ್ಟ್ರಧ್ವಜ ತಯಾರಿ.. ದಶಕಗಳಿಂದ ದೇಶ ಸೇವೆ