ETV Bharat / state

ಮ್ಯಾಟ್ರಿಮೋನಿಯಲ್​ ಸ್ನೇಹಿತನ ಬಗ್ಗೆ ಹುಷಾರ್! ಹಲವು ಯುವತಿಯರಿಗೆ 62 ಲಕ್ಷ ವಂಚಿಸಿದ ಆರೋಪಿ ಸೆರೆ

ಮ್ಯಾಟ್ರಿಮೋನಿಯಲ್ ಸೈಟ್​ ಮೂಲಕ ಪರಿಚಯ ಆಗುವವರ ಬಗ್ಗೆ ಹುಷಾರಾಗಿರಿ. ಏಕೆಂದರೆ ಯುವಕನೋರ್ವ, ಸುಳ್ಳು ಹೇಳಿ ನಂಬಿಸಿ ಹಲವು ಯುವತಿಯರಿಗೆ ಮೋಸ ಮಾಡಿದ್ದಾನೆ.

matrimonial sites Cheating case Davanagere
ಬಂಧಿತ ಆರೋಪಿ (ETV Bharat)
author img

By ETV Bharat Karnataka Team

Published : 3 hours ago

ದಾವಣಗೆರೆ: ಮ್ಯಾಟ್ರಿಮೋನಿಯಲ್​ ಸೈಟ್​ನಲ್ಲಿ ಹೈಪ್ರೋಫೈಲ್ ಕ್ರಿಯೇಟ್ ಮಾಡಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯುವತಿಯರು ಹುಷಾರಾಗಿರಬೇಕಾಗಿದೆ. ಹೀಗೆ ಯುವತಿಯರಿಗೆ ವಂಚಿಸುತ್ತಿದ್ದ ಖತರ್ನಾಕ್ ಕಿಲಾಡಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಾಚಹಳ್ಳಿ ಗ್ರಾಮದ ಮಾಧು ಅಲಿಯಾಸ್ ಮಧು ಬಂಧಿತ ಆರೋಪಿ.

ಹೈಪ್ರೋಫೈಲ್ ಕ್ರಿಯೇಟ್ ಮಾಡಿ ವಂಚನೆ: ಆರೋಪಿ ಮಧು ಮೊದಲು ಮ್ಯಾಟ್ರಿಮೋನಿಯಲ್ ವೆಬ್​ಸೈಟ್​ನಲ್ಲಿ ಹೈಪ್ರೋಫೈಲ್ ಕ್ರಿಯೇಟ್ ಮಾಡಿ, ಅದರಲ್ಲಿನ ಯುವತಿಯರನ್ನು ಸಂಪರ್ಕಿಸಿ ಪರಿಚಯವಾಗುತ್ತಿದ್ದ. ಬಳಿಕ ಅವರಿಗೆ ಹತ್ತಿರವಾಗಿ ನಾನು ಎಂಜಿನಿಯರ್, ಶ್ರೀಮಂತ ಮತ್ತು ಸರ್ಕಾರಿ ನೌಕರ ಅಂತೆಲ್ಲಾ ಸುಳ್ಳು ಹೇಳುತ್ತಿದ್ದ. ಜೊತೆಗೆ ಮದುವೆ ಆಗುವುದಾಗಿ ಮತ್ತು ನಿಮಗೆ ಸರ್ಕಾರಿ ನೌಕರಿಯನ್ನು ಕೊಡಿಸುವುದಾಗಿ ಯುವತಿಯರನ್ನು ನಂಬಿಸಿ, ನಂತರ ಯವತಿಯರಿಗೆ ಹಿಂಸೆ ಕೊಡುವುದಲ್ಲದೇ ಅವರಿಂದ ಹಣವನ್ನೂ ಕೂಡ ಪಡೆದು ವಂಚಿಸುತ್ತಿದ್ದ. ಹೀಗೆ ಹಲವರಿಗೆ ಈತ ಮೋಸ ಮಾಡಿದ್ದಾನೆ ಎಂದು ದಾವಣಗೆರೆ ಪೊಲೀಸರು ಮಾಹಿತಿ ನೀಡಿದ್ದಾರೆ.

ದಾವಣಗೆರೆ ಯುವತಿಗೂ ಹಾಗೆಯೇ ಮ್ಯಾಟ್ರಿಮೋನಿ ವೆಬ್​ಸೈಟ್​ನಲ್ಲಿ ಪರಿಚಯವಾಗಿ ಬಳಿಕ ತಾನು ರೈಲ್ವೆ ಇಲಾಖೆಯ ವರ್ಕಶಾಫ್​​ನಲ್ಲಿ ಎಂಜಿನಿಯರ್ ಎಂದು ನಂಬಿಸಿದ್ದ. ಬಳಿಕ ಯುವತಿಗೆ ಸರ್ಕಾರಿ ನೌಕರಿ ಆಸೆ ತೋರಿಸಿ 21 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ಅಷ್ಟೇ ಅಲ್ಲ ಹೀಗೆ ಹರಿಹರ, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಸೇರಿ ಒಟ್ಟು 8 ಪೊಲೀಸ್ ಠಾಣೆಗಳಲ್ಲಿ ಹಲವು ಮಹಿಳೆಯರಿಗೆ 62.83 ಲಕ್ಷ ಹಣ ಮೋಸ ಮಾಡಿರುವ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಆರೋಪಿಯನ್ನು ದಾವಣಗೆರೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಾವಣಗೆರೆ ಪ್ರಕರಣದಲ್ಲಿ 21 ಲಕ್ಷದ ಪೈಕಿ 4 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದು ಯುವತಿಗೆ ಪೊಲೀಸರು ಕೊಡಿಸಿದ್ದಾರೆ.

ಸಾರ್ವಜನಿಕರ ಗಮನಕ್ಕೆ..! ಮ್ಯಾಟ್ರಿಮೋನಿಯಲ್ ಸೈಟ್​ಗಳ ಮೂಲಕ ವಂಚಕರು ಪರಿಚಯ ಮಾಡಿಕೊಂಡು ಹೆಣ್ಣುಮಕ್ಕಳ ಜೊತೆ ನಯವಾಗಿ ಮಾತನಾಡಿ ವಂಚಿಸುವವರ ಬಗ್ಗೆ ಹಾಗೂ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಕೇಳುವವರ ಸಾರ್ವಜನಿಕರು ಜಾಗೃತರಾಗಿರಬೇಕು. ಇಂತಹ ಘಟನೆಗಳು ಕಂಡುಬಂದರೆ ಕೂಡಲೇ ಸ್ಥಳೀಯ ಠಾಣೆಗೆ ಹೋಗಿ ದೂರು ನೀಡಲು ದಾವಣಗೆರೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.

"ಮಂಡ್ಯ ಮೂಲದ ಮಧು ವಿರುದ್ಧ ಪ್ರಕರಣ ದಾಖಲಾಗಿತ್ತು. ಈತ ಮ್ಯಾಟ್ರಿಮೋನಿ ಸೈಟ್​ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ, ಬಳಿಕ ಅಲ್ಲಿಂದ ಯುವತಿಯರ ಮಾಹಿತಿ ಪಡೆದು ಅವರನ್ನು ಸಂಪರ್ಕಿಸುತ್ತಿದ್ದ. ಬಳಿಕ ತಾನು ನಾನು ಸರ್ಕಾರಿ ಕೆಲಸದಲ್ಲಿದ್ದು, ನಿಮಗೂ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ವಂಚನೆ ಮಾಡಿರುತ್ತಾನೆ. ದಾವಣಗೆರೆಯಲ್ಲಿ ದೂರು ನೀಡಿರುವ ಯುವತಿಯಿಂದ 21 ಲಕ್ಷ ರೂ. ಪಡೆದುಕೊಂಡಿದ್ದಾನೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ, ಮೋಸ ಸೇರಿದಂತೆ ಇವನ ಮೇಲೆ ಒಟ್ಟು ಎಂಟು ಪ್ರಕರಣಗಳಿರುವುದು ತನಿಖೆಯಲ್ಲಿ ತಿಳಿದು ಬಂದಿದೆ" - ದಾವಣಗೆರೆ ಎಸ್​ಪಿ ಉಮಾಪ್ರಶಾಂತ್

ಇದನ್ನೂ ಓದಿ: ಶಿವಮೊಗ್ಗ: ಜಿಲ್ಲೆಯ ಮೊದಲ ಡಿಜಿಟಲ್ ಅರೆಸ್ಟ್ ಪ್ರಕರಣ ಬೇಧಿಸಿದ ಸಿಇಎನ್ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.