ಒಡಿಶಾದ ಖೋರ್ಧಾದಲ್ಲಿ ಪಟಾಕಿ ಸ್ಫೋಟ: 4 ಸಾವು, 3 ಮಂದಿಗೆ ಗಂಭೀರ ಗಾಯ - etv bharath kannada news

🎬 Watch Now: Feature Video

thumbnail

By

Published : Mar 6, 2023, 4:03 PM IST

ಖೋರ್ಧಾ (ಒಡಿಶಾ) : ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 4 ಮಂದಿ ಸಾವನ್ನಪ್ಪಿದ್ದು, 3 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಖೋರ್ಧಾ ಜಿಲ್ಲೆಯ ತಂಗಿ ಪೊಲೀಸ್ ಠಾಣೆಯ ಭೂಷಣಪುರ ಗ್ರಾಮದಲ್ಲಿ ನಡೆದಿದೆ. 

ಇದನ್ನೂ ಓದಿ : 'ಬಿಜೆಪಿಯ ಟೀಕೆಗೆ ಹೆದರುವುದಿಲ್ಲ, ಏಕೆಂದರೆ ಇದು ಧೈರ್ಯ ಮತ್ತು ಹೇಡಿತನದ ನಡುವಿನ ಹೋರಾಟ'

ಗಾಯಾಳುಗಳನ್ನು ಈಗಾಗಲೇ ತಂಗಿ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ.  ತೀವ್ರವಾಗಿ ಸುಟ್ಟ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  ಹೋಳಿ ಹಬ್ಬಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂಬುದು ತಿಳಿದು ಬಂದಿದೆ. 

ಇದನ್ನೂ ಓದಿ : ಪತ್ನಿ ಕೊಂದು ಶವ ಸಾಗಿಸುತ್ತಿದ್ದಾಗ ಬೆನ್ನಟ್ಟಿದ ಜನರು; ಶವದ ಸಮೇತ ಪೊಲೀಸ್ ಠಾಣೆಗೆ ಬಂದ ಆರೋಪಿ

ಹೊತ್ಕೇಶ್ವರ್ ಬೆಹೆರಾ ಅವರ ನೇತೃತ್ವದಲ್ಲಿ ಪಟಾಕಿಗಳನ್ನು ತಯಾರಿಸಲಾಗಿದೆ ಎಂಬುದು ತಿಳಿದು ಬಂದಿದ್ದು, ಪೊಲೀಸರು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಸ್ಫೋಟದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. 

ಇದನ್ನೂ ಓದಿ : ಉಮೇಶ್ ಪಾಲ್ ಕೊಲೆ ಕೇಸ್: ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಮತ್ತೋರ್ವ ಆರೋಪಿ ಹತ್ಯೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.