thumbnail

ಅಂಗನವಾಡಿ ಕೇಂದ್ರದ ಸೆಪ್ಟಿಕ್​ ಟ್ಯಾಂಕ್​ನಲ್ಲಿ ಬಿದ್ದು ಪುಟ್ಟ ಬಾಲಕಿ ಸಾವು

By

Published : Feb 9, 2023, 2:13 PM IST

Updated : Feb 14, 2023, 11:34 AM IST

ಬೀದರ್: ಅಂಗನವಾಡಿ ಕೇಂದ್ರದ ಸೆಪ್ಟಿಕ್​ ಟ್ಯಾಂಕ್​ನಲ್ಲಿ ಬಿದ್ದು ಪುಟ್ಟ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆ ಔರಾದ್ ಪಟ್ಟಣದ ಟೀಚರ್ಸ್ ಕಾಲೋನಿಯ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ನಡೆದಿದೆ.

3 ವರ್ಷದ ಸ್ಫೂರ್ತಿ ಎಂಬ ಬಾಲಕಿ ಊಟದ ತಟ್ಟೆ ಸಮೇತ ಸೆಪ್ಟಿಕ್​ ಟ್ಯಾಂಕ್​ಗೆ ಬಿದ್ದು ಸಾವನ್ನಪ್ಪಿದ್ದಾರೆ. ಟ್ಯಾಂಕ್​ನ ಮೇಲ್ಛಾವಣಿ ಮುಚ್ಚದ ಕಾರಣ ಆಯಾತಪ್ಪಿ ಬಿದ್ದು ಬಾಲಕಿ ಸಾವನ್ನಪ್ಪಿದ್ದು, ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಜೊತೆಗೆ ಸ್ಥಳೀಯರು, ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಡರಾತ್ರಿಯವರೆಗೆ ಪ್ರತಿಭಟನೆ ನಡೆಸಿದ್ದಾರೆ. ಬಾಲಕಿ ಪೋಷಕರು ಜೌರಾದ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ತೋಟದ ಮನೆಗೆ ನುಗ್ಗಿದ್ದ ಚಿರತೆಯನ್ನು ಕೂಡಿಹಾಕಿದ ಗ್ರಾಮಸ್ಥರು

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.