25 ನಿಮಿಷ ಲಿಫ್ಟ್ನಲ್ಲಿ ಸಿಲುಕಿದ ಬಾಲಕಿಯರು.. ವಿಡಿಯೋ ನೋಡಿ - Etv Bharat Kannada
🎬 Watch Now: Feature Video

ಘಾಜಿಯಾಬಾದ್ (ಉತ್ತರಪ್ರದೇಶ): ಮೂವರು ಬಾಲಕಿಯರು ಲಿಫ್ಟ್ನಲ್ಲಿ ಸಿಲುಕಿರುವ ಘಟನೆ ಜಿಲ್ಲೆಯ ಕ್ರಾಸಿಂಗ್ ರಿಪಬ್ಲಿಕ್ ನಗರದ ಅಸ್ಸೊಟೆಕ್ ನೆಕ್ಸ್ಟ್ ಸೊಸೈಟಿ ಎಂಬಲ್ಲಿ ನಡೆದಿದೆ. ಮೂವರು ಬಾಲಕಿಯರು ಲಿಫ್ಟ್ ಮೂಲಕ ಹೋಗುವಾಗ ತಾಂತ್ರಿಕ ದೋಷದಿಂದ ಸುಮಾರು 25 ನಿಮಿಷಗಳ ಕಾಲ ಲಿಫ್ಟ್ ಸ್ಥಗಿತಗೊಂಡಿದೆ. ಇದರಿಂದ ಭಯಗೊಂಡ ಬಾಲಕಿಯರು ಲಿಫ್ಟ್ನ ಒಳಗಡೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಬಾಲಿಕಿಯರು ಲಿಫ್ಟ್ನಲ್ಲಿ ಸಿಲುಕಿರುವ ವಿಷಯ ತಿಳಿದು ಬಂದಿದ್ದು, ಕೂಡಲೇ ಅವರನ್ನು ಲಿಫ್ಟ್ ಮೂಲಕ ಹೊರ ಕರೆತರಲಾಗಿದೆ. ಈ ಕುರಿತು ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಟ್ಟಡದ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೇ ಲಿಫ್ಟ್ ನಿರ್ವಹಣೆ ಮಾಡುವ ಕಂಪನಿ ಮೇಲೂ ಆರೋಪ ಕೇಳಿ ಬಂದ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Feb 3, 2023, 8:34 PM IST