ಜಿ-20 ಶೃಂಗಸಭೆ: ತಮಿಳುನಾಡಿನಿಂದ ದೆಹಲಿಗೆ ತಲುಪಿದ 22 ಅಡಿ ಎತ್ತರದ ನಟರಾಜನ ವಿಗ್ರಹ

🎬 Watch Now: Feature Video

thumbnail

By ETV Bharat Karnataka Team

Published : Aug 29, 2023, 11:06 PM IST

ನವದೆಹಲಿ: ಮಹತ್ವದ ಜಿ-20 ಶೃಂಗಸಭೆ ನಿಮಿತ್ತ 22 ಅಡಿ ಎತ್ತರದ ನಟರಾಜನ ವಿಗ್ರಹವು ದೆಹಲಿಗೆ ತಲುಪಿದೆ. ತಮಿಳುನಾಡಿನಲ್ಲಿ ತಯಾರಿಸಿರುವ ಬೃಹತ್​ ವಿಗ್ರಹವನ್ನು ರಸ್ತೆ ಮೂಲಕ ರಾಷ್ಟ್ರ ರಾಜಧಾನಿಗೆ ತರಲಾಗಿದೆ. ಶೃಂಗಸಭೆಗೆ ಆಗಮಿಸುವ ಅನೇಕ ರಾಷ್ಟ್ರಗಳ ನಾಯಕರನ್ನು ಅಷ್ಟಧಾತುಗಳ ನಟರಾಜನ ವಿಗ್ರಹ ಸ್ವಾಗತಿಸಲಿದೆ.

ಭಾರತದ ನೇತೃತ್ವದಲ್ಲಿ ಸೆಪ್ಟೆಂಬರ್​ 9ರಂದು 10ರಂದು ಜಿ-20 ಶೃಂಗಸಭೆ ನಡೆಯಲಿದೆ. ಸುಮಾರು 29 ರಾಷ್ಟ್ರಗಳ ನಾಯಕರು ಆಗಮಿಸುತ್ತಿದ್ದಾರೆ. ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪಂನಲ್ಲಿ ಶೃಂಗಸಭೆ ನಡೆಯಲಿದ್ದು, ಇಲ್ಲಿ ನಟರಾಜನ ವಿಗ್ರಹವು ಇರಿಸಲಾಗುತ್ತದೆ. ಚಿನ್ನ, ಬೆಳ್ಳಿ, ಸೀಸ, ತಾಮ್ರ, ತವರ, ಪಾದರಸ, ಕಬ್ಬಿಣ ಮತ್ತು ಸತುವು ಸೇರಿ ಅಷ್ಟಧಾತುಗಳಿಂದ ಈ ವಿಗ್ರಹ ತಯಾರಿಸಲಾಗಿದೆ. 

ಶೃಂಗಸಭೆ ಸ್ಥಳದಲ್ಲಿ 6 ಅಡಿ ಎತ್ತರದ ವೇದಿಕೆ ಮೇಲೆ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದರಿಂದ ವಿಗ್ರಹದ ಒಟ್ಟು ಎತ್ತರ 28 ಅಡಿ ಆಗಲಿದೆ. ಇದರ ತೂಕ 19 ಮೆಟ್ರಿಕ್ ಟನ್ ಇದೆ. ತಮಿಳುನಾಡಿನಿಂದ ಮಧ್ಯಪ್ರದೇಶದ ಗ್ವಾಲಿಯರ್ ಮೂಲಕ ದೆಹಲಿಗೆ ತರಲಾಗಿದೆ. 

ದೇಶದ ಪ್ರಾಚೀನ ಕಲೆ, ಸಂಸ್ಕೃತಿ, ಪ್ರಜಾಪ್ರಭುತ್ವದ ಪರಿಚಯವನ್ನು ವಿದೇಶಿ ಅತಿಥಿಗಳಿಗೆ  ಮಾಡಿಕೊಡುವ ಉದ್ದೇಶದೊಂದಿಗೆ ನಟರಾಜನ ವಿಗ್ರಹ ಸಿದ್ಧಪಡಿಸಲಾಗಿದೆ. ವಿಶ್ವದ ಅತಿ ಎತ್ತರದ ನಟರಾಜನ ವಿಗ್ರಹ ಎಂದೇ ಹೇಳಲಾಗುತ್ತಿದ್ದು, ಅಂದಾಜು 10 ಕೋಟಿ ವೆಚ್ಚದಲ್ಲಿ ತಮಿಳುನಾಡಿನ ಸ್ವಾಮಿಮಲೈನಲ್ಲಿರುವ ದೇವ ಸೇನಾಪತಿ ಶಿಲ್ಪಕಲಾ ಸ್ಟುಡಿಯೋದಲ್ಲಿ ವಿಗ್ರಹವನ್ನು ಶಿಲ್ಪಿಗಳಿಂದ ಸಂಸ್ಕೃತಿ ಸಚಿವಾಲಯವು ತಯಾರಿಸಿದೆ.

ಇದನ್ನೂ ಓದಿ: ಜಿ-20 ಶೃಂಗಸಭೆಗೆ ಭರದ ಸಿದ್ಧತೆ: ದೆಹಲಿ ರಸ್ತೆಗಳು, ಸ್ಥಳಗಳ ಅಲಂಕಾರಕ್ಕೆ 6.75 ಲಕ್ಷ ಸಸಿ, ಹೂವಿನ ಕುಂಡಗಳು!

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.