ಅಗಲಿದ ಶತಾಯುಷಿ ಅಜ್ಜಿಗೆ ಅದ್ಧೂರಿ ಅಂತ್ಯಕ್ರಿಯೆ ನೆರವೇರಿಸಿದ ಮೊಮ್ಮಕ್ಕಳು - ಪಟಾಕಿ
🎬 Watch Now: Feature Video
ಚಂಡೀಗಡ್: ಯಾರಾದರು ಸಾವನ್ನಪ್ಪಿದರೆ ಮನೆ ಮಂದಿಯೆಲ್ಲ ಭಾವುಕರಾಗಿ ನೋವಿನಿಂದ ಅಂತ್ಯಸಂಸ್ಕಾರ ಮಾಡುವುದನ್ನು ನೋಡಿದ್ದೇವೆ. ಆದರೆ, ಪಂಜಾಬ್ನ ಬಾಘಪುರಾಣದ ಬಂಬಿಹಾ ಭಾಯಿ ಎಂಬ ಗ್ರಾಮದಲ್ಲಿ ತಮ್ಮ ಶತಾಯುಷಿ ಅಜ್ಜಿಗೆ ಭರ್ಜರಿಯಾಗಿ ಬ್ಯಾಂಡ್ ಬಾರಿಸುವ ಮೂಲಕ ಅಂತ್ಯಕ್ರಿಯೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 104 ವರ್ಷದ ಸುರ್ಜಿತ್ ಕೌರ್ ಧರ್ಮ ಅವರ ಅಂತ್ಯಕ್ರಿಯೆಯನ್ನು ಅವರ ಮೊಮ್ಮಕ್ಕಳು ಬಹಳ ವಿಜೃಂಭಣೆಯಿಂದ ಸಂಗೀತ ವಾದ್ಯಗಳನ್ನು ಬಾರಿಸುವ ಮೂಲಕ ಮತ್ತು ಪಟಾಕಿ ಸಿಡಿಸಿ ಶತಾಯುಷಿ ಅಜ್ಜಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
Last Updated : Feb 3, 2023, 8:38 PM IST