Watch... ಇಂದಿನಿಂದ 7 ದಿನಗಳ ಕಾಲ ಸಂತ ಏಕನಾಥ ಮಹಾರಾಜರ ಜಯಂತಿ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Feb 6, 2023, 4:07 PM IST

Updated : Feb 14, 2023, 11:34 AM IST

ಅಮರಾವತಿ ( ಮಹಾರಾಷ್ಟ್ರ): ಜಿಲ್ಲೆಯ ಚಂದೂರ್​ ತಾಲೂಕಿನ ಆಮ್ಲ ವಿಶ್ವೇಶ್ವರ್​ ಎಂಬ ಗ್ರಾಮದಲ್ಲಿ ಸತತ 70 ವರ್ಷಗಳಿಂದ ಸಂತ ಏಕನಾಥ ಮಹಾರಾಜರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡ ಬರಲಾಗುತ್ತಿದೆ. 7 ದಿನಗಳ ಕಾಲ ನಡೆಯುವ ಈ ಜಯಂತಿಯಲ್ಲಿ  ಸುತ್ತಲು ಹಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು ಇಲ್ಲಿಗೆ ಆಗಮಿಸಿ ಜಯಂತಿಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲದೇ ಇಲ್ಲಿಯ ವಿಶೇಷತೆ ಎಂದರೆ, 7 ದಿನಗಳ ಕಾಲ ನಡೆಯುವ ಈ ಜಯಂತಿಯಲ್ಲಿ ಬರುವಂತಹ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ. 

ಪ್ರತಿದಿನ ಸುಮಾರು 100 ಕ್ವಿಂಟಾಲ್​ ತರಕಾರಿ, 30ಕ್ವಿಂಟಾಲ್​ ಹಿಟ್ಟು, 20ಕ್ವಿಂಟಾಲ್​ ಅಕ್ಕಿ ಅನ್ನಪ್ರಸಾದಕ್ಕೆ ಬೇಕಾಗುತ್ತದೆ. ಇದೆಲವನ್ನು ಭಕ್ತರೇ ನೀಡುತ್ತಾರೆ. ಇನ್ನು ಪ್ರತಿ ದಿನ ಸಾವಿರಾರು ಜನ ಬರು ಹಿನ್ನೆಲೆ ಬೆಳಗಿನ ಜಾವ 4 ರಿಂದಲೇ ಅಡುಗೆಯನ್ನು ಪ್ರಾರಂಭಿಸುತ್ತಾರೆ. ಸುತ್ತ ಗ್ರಾಮದ ರೈತರು ತಮ್ಮ ಹೊಲದಲ್ಲಿ ಬೆಳೆಸಿರುವ ಬೆಳಗಳನ್ನು ನೇರವಾಗಿ ಇಲ್ಲಿಗೆ ತಂದು ಅರ್ಪಣೆ ಮಾಡುತ್ತಾರೆ.  

ಇದನ್ನೂ ಓದಿ: ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾದ ಜೋಳದ ತೆನೆ ರಾಶಿ.. ಮನಕಲಕುವಂತಿದೆ ರೈತನ ಆಕ್ರಂದನ

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.