ಬೈರುತ್ ಸ್ಫೋಟದಲ್ಲಿ ಮಡಿದವರಿಗೆ ಸಂತಾಪ: ಐಫೆಲ್ ಟವರ್ನ ದೀಪಗಳನ್ನು ಆರಿಸಿದ ಫ್ರಾನ್ಸ್ - ಬೈರುತ್ ಬಂದರು ಸ್ಫೋಟ
🎬 Watch Now: Feature Video
ಪ್ಯಾರಿಸ್: ಬೈರುತ್ ಬಂದರು ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಲು ಬುಧವಾರ ಮಧ್ಯರಾತ್ರಿಯಲ್ಲಿ ಪ್ಯಾರಿಸ್‌ನ ಐಫೆಲ್ ಟವರ್ನ ದೀಪಗಳನ್ನು ಆರಿಸಲಾಯಿತು. ಮಂಗಳವಾರ ನಡೆದ ಸ್ಫೋಟದಲ್ಲಿ ಕನಿಷ್ಠ 135 ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಬೈರುತ್‌ನ ಲಕ್ಷಾಂತರ ನಿವಾಸಿಗಳು ನಿರಾಶ್ರಿತರಾಗಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮ್ಯಾಕ್ರೋನ್ ಅವರು ಚೂರುಚೂರಾದ ಲೆಬನಾನ್ ರಾಜಧಾನಿಗೆ ತೆರಳುವುದಾಗಿ ಘೋಷಿಸಿದ್ದಾರೆ. ಅಲ್ಲದೆ ದುರಂತ ಸ್ಥಳದಲ್ಲಿ ಜನರಿಗೆ ನೆರವಾಗಲು ಫ್ರೆಂಚ್ ರಕ್ಷಣಾ ತಂಡ 2 ವಿಮಾನಗಳೊಂದಿಗೆ ತೆರಳಿದೆ.