thumbnail

By

Published : Dec 11, 2019, 6:37 PM IST

ETV Bharat / Videos

ಗುಂಡಿನ ದಾಳಿ: ಪೊಲೀಸ್​ ಉನ್ನತಾಧಿಕಾರಿ ಸೇರಿ ಆರು ಜನ ಸಾವು!

ಅಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದೆ. ಪೊಲೀಸರು ಮತ್ತು ಬಂದೂಕುಧಾರಿಗಳ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್​ ಉನ್ನತಾಧಿಕಾರಿ ಸೇರಿ ಆರು ಜನರು ಸಾವನ್ನಪ್ಪಿರುವ ಘಟನೆ ನ್ಯೂ ಜೆರ್ಸಿ ರಾಜ್ಯದ ಜೆರ್ಸಿ ನಗರದಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಇಲ್ಲಿನ ಮಾಲ್​ವೊಂದರಲ್ಲಿ ಟ್ರಕ್​ ಮೂಲಕ ಬಂದ ಇಬ್ಬರು ಬಂದೂಕುಧಾರಿಗಳು ದಿಢೀರ್​ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ದುಷ್ಕರ್ಮಿಗಳ ದಾಳಿಗೆ ಪ್ರತ್ಯುತ್ತರ ನೀಡಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್​ ಉನ್ನತ ಅಧಿಕಾರಿ ಮತ್ತು ಮೂವರು ನಾಗರಿಕರು ಹಾಗೂ ಇಬ್ಬರು ದುಷ್ಕರ್ಮಿಗಳು ಸೇರಿದಂತೆ ಒಟ್ಟು ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಕೆಲ ನಾಗರಿಕರು ಸೇರಿದಂತೆ ಪೊಲೀಸರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿ ಬಗ್ಗೆ ಯಾವುದೇ ಉಗ್ರ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ. ಮೃತರ ಕುಟುಂಬಗಳಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.