ಹೊತ್ತಿ ಉರಿದ ದಿನಚರಿ ವಸ್ತುಗಳ ಮಾಲ್... ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ! - fire in detroit grocery store,
🎬 Watch Now: Feature Video
ಅಮೆರಿಕ ಡೆಟ್ರಾಯಟ್ನ ದಿನಚರಿ ವಸ್ತುಗಳ ಮಾಲ್ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೊತ್ತಿ ಉರಿಯುತ್ತಿದ್ದ ಬೆಂಕಿ ನಂದಿಸಲು ಸುಮಾರು 40 ಅಗ್ನಿಶಾಮಕ ಯಂತ್ರಗಳಿಂದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಈ ಘಟನೆಯಲ್ಲಿ ಮಾಲ್ ಮಾಲೀಕ ಮತ್ತು ಗ್ರಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಘಟನೆಗೆ ಅನೇಕ ಕಾರಣಗಳೆಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.