ಹೋಳಿ ಸಂಭ್ರಮಕ್ಕೆ ಸಿಹಿತಿನಿಸು: ಬಾಯಲ್ಲಿ ನೀರೂರಿಸುವ ಗುಲಾಬ್ ಜಾಮೂನ್ ಮಾಡುವ ವಿಧಾನ - how to make gulab jamun
🎬 Watch Now: Feature Video
ಭಾರತದ ಪ್ರಸಿದ್ಧ ಸಿಹಿ ತಿನಿಸುಗಳ ಪೈಕಿ ಖೋವಾ ಗುಲಾಬ್ ಜಾಮೂನ್ ಅಗ್ರ ಸ್ಥಾನದಲ್ಲಿದೆ. ಗುಲಾಬ್ ಜಾಮೂನ್ ಎಂದಾಕ್ಷಣ ಬಹುತೇಕರ ಬಾಯಲ್ಲಿ ನೀರೂರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರೂ ಸಹ ಈ ತಿನಿಸನ್ನು ಸವಿಯಲು ಬಯಸುತ್ತಾರೆ. ಬಣ್ಣದ ಹಬ್ಬ ಹೋಳಿ ಸಂಭ್ರಮಕ್ಕೆ ಎರಡು ದಿನಗಳು ಬಾಕಿ ಇದ್ದು, ಬಣ್ಣಗಳ ಸಂಗ್ರಹ ಜೊತೆಗೆ ಸಿಹಿ ತಿಂಡಿಯವರೆಗೆ ಎಲ್ಲಾ ತಯಾರಿ ಆರಂಭಗೊಂಡಿದೆ. ಬಾಯಲ್ಲಿ ನೀರೂರಿಸುವ ಗುಲಾಬ್ ಜಾಮೂನ್ ತಯಾರಿಕೆಗೆ ಏನೆಲ್ಲಾ ಅಗತ್ಯವಿದೆ, ಮಾಡುವ ವಿಧಾನ ಹೇಗೆಂದು ತಿಳಿದುಕೊಳ್ಳಿ.
ಗುಲಾಬ್ ಜಾಮೂನ್ ಮಾಡುವ ವಿಧಾನ: ಖೋವಾ 1 ಕಪ್, ಸಣ್ಣ ರವೆ 2 ಸ್ಪೂನ್, ಮೈದಾ 3 ಸ್ಪೂನ್, ಬೇಕಿಂಗ್ ಪೌಡರ್ 1/4 ಸ್ಪೂನ್, ಏಲಕ್ಕಿ ಪುಡಿ 1 ಸ್ಪೂನ್ - ಇವೆಲ್ಲವನ್ನೂ ಬರೆಸಿ ಮೃದುವಾದ ಹಿಟ್ಟು ತಯಾರಿಸಿ. ಬಳಿಕ ಹಾಲು 2 ಸ್ಪೂನ್ ಬೆರೆಸಿ ಮೃದು ಹಿಟ್ಟು ತಯಾರಿಸಿ. ನಂತರ ಸಕ್ಕರೆ ಪಾಕ ಮಾಡಿಕೊಳ್ಳಿ. ಸಕ್ಕರೆ ನಿಮ್ಮ ರುಚಿಗೆ ತಕ್ಕಷ್ಟು (1/4 ಕಪ್), ನೀರು 1 ಕಪ್, ಸಕ್ಕರೆ ಕರಗುವವರೆಗೂ ನೀರನ್ನು ಕುದಿಸಿ ಇಟ್ಟುಕೊಳ್ಳಿ. ಕಲಸಿಟ್ಟ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಉಂಡೆಯೊಳಗೆ ಪಿಸ್ತಾ, ಗೋಡಂಬಿ ಇಡಬಹುದು. ಬಳಿಕ ಈ ಉಂಡೆಯನ್ನು ಎಣ್ಣೆಯಲ್ಲಿ ಕಾಯಿಸಿ. ಕಂದು ಬಣ್ಣ ಬಂದ ಈ ಉಂಡೆಗಳನ್ನು ಸಕ್ಕರೆ ಪಾಕಕ್ಕೆ ಹಾಕಿ. ಪರಿಮಳಕ್ಕಾಗಿ ಸಕ್ಕರೆ ಪಾಕಕ್ಕೆ ಸ್ವಲ್ಪ ರೋಸ್ ವಾಟರ್ ಬೆರೆಸಿದರೆ ರುಚಿ ರುಚಿಯಾದ ಗುಲಾಬ್ ಜಾಮೂನ್ ರೆಡಿ.. ಟೇಸ್ಟ್ ಮಾಡಿ ಆನಂದಿಸಿ.
ಇದನ್ನೂ ಓದಿ: ಬಗೆ ಬಗೆ ಸಿಹಿ ತಿಂಡಿಗಳೊಂದಿಗೆ ನೀವೂ ವರ್ಣರಂಜಿತ ಹೋಳಿ ಹಬ್ಬ ಆಚರಿಸಿ!
ಮೃದುವಾದ ಹಾಗೂ ರಸವತ್ತಾದ ಗುಲಾಬ್ ಜಾಮೂನ್ ಮಾಡುವ ವಿಧಾನವನ್ನು ನಿಮಗೆ ತೋರಿಸಿದ್ದೇವೆ. ಮನೆಯಲ್ಲಿ ಈ ಜಾಮೂನ್ ತಯಾರಿಸಿ ನಿಮ್ಮ ಪ್ರೀತಿ ಪಾತ್ರರಿಗೂ ಹಂಚಿರಿ.