ಉಣಕಲ್ ಬಳಿ ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ.. VIDEO - ಹುಬ್ಬಳ್ಳಿ ಕಾರು ಪಾರ್ಕಿಂಗ್ ಗಲಾಟೆ
🎬 Watch Now: Feature Video
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಗರದ ಉಣಕಲ್ ಬಳಿ ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬದ ನಡುವೆ ಮಾರಾಮಾರಿ ನಡೆದಿದೆ. ಸಾರ್ವಜನಿಕರೊಬ್ಬರು ಇಂದು ರಸ್ತೆ ಪಕ್ಕ ಕಾರು ಪಾರ್ಕ್ ಮಾಡಿ ಹೋಟೆಲ್ಗೆ ಹೋಗಿದ್ದರು, ಇದಕ್ಕೆ ರೊಚ್ಚಿಗೆದ್ದ ಪಕ್ಕದ ಮನೆಯವರು ತಮ್ಮ ಮನೆಯೆದುರು ಯಾಕೆ ಪಾರ್ಕ್ ಮಾಡಿದ್ದೀರಾ ಎಂದು ಕಾರಿನ ಗ್ಲಾಸ್ ಒಡೆದು ಚಾಲಕನಿಗೆ ಹೊಡೆದಿದ್ದಾರೆ. ಬಳಿಕ ಕಾರು ಚಾಲಕ ಪುನಃ ತನ್ನ ಕುಟುಂಬದ ಜೊತೆಗೆ ಬಂದು ಜಗಳ ತೆಗೆದಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗಲಾಟೆಯ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
Last Updated : Feb 3, 2023, 8:19 PM IST