ಶಾಸಕ ರಾಮಲಿಂಗ ರೆಡ್ಡಿ ಜೊತೆ ಕಿಚ್ಚ ಸುದೀಪ್ ಮಾತುಕತೆ: ಕುತೂಹಲ - ಕಾಂಗ್ರೆಸ್ ಶಾಸಕ ರಾಮಲಿಂಗ ರೆಡ್ಡಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17470110-thumbnail-3x2-sanju.jpg)
ಬೆಂಗಳೂರು: ತಮ್ಮ ಅಮೋಘ ಅಭಿನಯದಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾರಂಗದಲ್ಲಿ ಸಕ್ಸಸ್ ಕಂಡಿರುವ ನಟ ಕಿಚ್ಚ ಸುದೀಪ್. ಸದ್ಯ ತಮಿಳು ನಿರ್ದೇಶಕರ ಜೊತೆ ಸಿನಿಮಾ ಮಾಡಲು ಸಜ್ಜಾಗಿರುವ ಇವರು ಬೆಂಗಳೂರಿನಲ್ಲಿ ಹೊಸ ಮಲ್ಟಿಪ್ಲೆಕ್ಸ್ ಉದ್ಘಾಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ರಾಮಲಿಂಗ ರೆಡ್ಡಿ, ಸತೀಶ್ ರೆಡ್ಡಿ ಕಿಚ್ಚನಿಗೆ ಸಾಥ್ ನೀಡಿದರು. ಇತ್ತೀಚಿಗೆ ನಟಿ ರಮ್ಯಾ ಹಾಗೂ ರಾಹುಲ್ ಗಾಂಧಿ ಮೂಲಕ ಸುದೀಪ್ ಅವರನ್ನು ರಾಜಕೀಯಕ್ಕೆ ಕರೆತರುವ ಕಸರತ್ತು ನಡೆಯತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಕಾಂಗ್ರೆಸ್ ಶಾಸಕ ರಾಮಲಿಂಗ ರೆಡ್ಡಿ ಜೊತೆ ಸುದೀಪ್ ಮಾತನಾಡಿದ್ದು ಬೇರೆ ಬೇರೆ ಚರ್ಚೆಗಳಿಗೆ ಕಾರಣವಾಗುತ್ತಿದೆ
ಓದಿ : ರಾಜ್ಯ ಸರ್ಕಾರಿ ಗೋಶಾಲೆಗಳಿಂದ 31 ಗೋವುಗಳನ್ನು ದತ್ತು ಪಡೆಯಲಿರುವ ಕಿಚ್ಚ ಸುದೀಪ್
Last Updated : Feb 3, 2023, 8:38 PM IST